ಕಲ್ಪ ಮೀಡಿಯಾ ಹೌಸ್ | ಕೂಡಲಿ(ಶಿವಮೊಗ್ಗ) |
ಕೂಡಲಿ ಶೃಂಗೇರಿ ಮಹಾಸಂಸ್ಥಾನದ #Koodli Shringeri Mahasamsthana ಉಭಯ ಜಗದ್ಗುರುಗಳು ಈ ಬಾರಿಯ ಚಾರ್ತುಮಾಸವನ್ನು ಶ್ರೀ ಕ್ಷೇತ್ರ ಕೂಡಲಿಯಲ್ಲಿ ಜುಲೈ 21ರಿಂದ ಆರಂಭಿಸಲಿದ್ದಾರೆ.
ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳು ಹಾಗೂ ತತ್ಕರಕಮಲ ಸಂಜಾತರಾದ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಈ ಬಾರಿಯ ತಮ್ಮ ಚಾರ್ತುಮಾಸ ವ್ರತವನ್ನು ಕ್ರೋಧಿನಾಮ ಸಂವತ್ಸರದ ಆಷಾಡ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆವರೆಗೂ ಅಂದರೆ ಜುಲೈ 21ರಿಂದ ನವೆಂಬರ್ 15ರವರೆಗೂ ಶ್ರೀಕ್ಷೇತ್ರ ಕೂಡಲಿ ಮೂಲ ಮಠದಲ್ಲಿ ಆಚರಿಸಲಿದ್ದಾರೆ.
Also read: ಇಂದಿನಿಂದ ಶಿವಮೊಗ್ಗ-ಚೆನ್ನೈ ಸೂಪರ್ ಫಾಸ್ಟ್ ರೈಲು ಆರಂಭ | ಎಲ್ಲೆಲ್ಲಿ ನಿಲ್ದಾಣ? ಸಮಯವೇನು?
ಜುಲೈ 21ರ ಭಾನುವಾರ ಕೂಡಲಿಯಲ್ಲಿ ವ್ಯಾಸ ಪೂಜೆ ನೆರವೇರಿಸುವ ಮೂಲಕ ವ್ರತ ಕೈಗೊಳ್ಳಲಿದ್ದಾರೆ. ಗುರುಗಳ ಚಾರ್ತುಮಾಸ ಅವಧಿಯಲ್ಲಿ ಭಕ್ತಾದಿಗಳು ಶ್ರೀಮಠಕ್ಕೆ ಭೇಟಿ ನೀಡಿ, ಉಭಯ ಜಗದ್ಗುರುಗಳ ದರ್ಶನ ಪಡೆದು, ಭಿಕ್ಷಾವಂದನೆ ಸಮರ್ಪಿಸಿ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post