ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ರಾಜ್ಯ ಪ್ರತಿಷ್ಠಿತ ಕಾರ್ಖಾನೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ #KirloskarFerrousIndustriesLtd ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಕಿರ್ಲೋಸ್ಕರ್ ವಸುಂಧರಾ #KirloskarVasundara ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಜೂನ್ 20ರಿಂದ 22ರವರೆಗೂ ಆಯೋಜಿಸಲಾಗಿದೆ.
ಜೂನ್ 20ರಿಂದ ಬೆಳಗ್ಗೆ 10 ಗಂಟೆಗೆ ತಳಕಲ್ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಇದೇ ಕಾಲೇಜಿನಲ್ಲಿ ನಡೆಯಲಿರುವ ಚಲನಚಿತ್ರೋತ್ಸವನ್ನು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಿಗೋಡಿ ಹಾಗೂ ಕೊಪ್ಪಳ #Koppal ನೂತನ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಗಳಾದ ಡಾ.ಬಿ.ಕೆ. ರವಿ ಅವರುಗಳು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಸಂದೇಶ ಮುಂದಿನ ಪೀಳಿಗೆಗಾಗಿ ಪೃಥ್ವಿಯನ್ನು ರಕ್ಷಿಸಿ, ಸಂರಕ್ಷಿಸಿ, ಉಳಿಸಿ ಪೌಷ್ಠಿಕ ಆಹಾರ, ನಳನಳಿಸುವ ಪ್ರಕೃತಿ ಮತ್ತು ಆರೋಗ್ಯಕರ ಸಮಾಜ” ಎಂಬುದು ಈ ವರ್ಷದ ಮುಖ್ಯ ವಿಷಯವಾಗಿದೆ.
ಈ ಸಮಾರಂಭದಲ್ಲಿ ರಾಜ್ಯ ಪರಿಸರ ಮತ್ತು ವನ್ಯಜೀವಿ ಸಂರಕ್ಷಕರು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಲಹೆಗಾರರಾದ ಸಂತೋಷ್ ಆರ್. ಸುತಾರ್ ಅವರು ಪರಿಸರ ಸಂರಕ್ಷಣೆ ಕುರಿತು ಮಾಡಿದ ಅಮೋಘ ಸಾಧನೆಗೆ ವಸುಂಧರಾ ಸನ್ಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕೂಡ್ಲಿಗಿಯ ಸಮುದಾಯ ಸಂಘಟಕರು ಮತ್ತು ಪರಿಸರವಾದಿಗಳಾದ ಜಿ. ಯರ‍್ರಿಸ್ವಾಮಿ ಅವರಿಗೆ ವಸುಂಧರಾ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಆರ್. ವಿ. ಗುಮಾಸ್ತೆ, ಈ ಚಲನಚಿತ್ರೋತ್ಸವದ ನಿರ್ದೇಶಕರಾದ ವಿರೇಂದ್ರ ಚಿತ್ರವ್, ವಸುಂಧರಾ ಕ್ಲಬ್ ಪುಣೆ #Pune ಅವರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ
ಜೂನ್ 22ರಂದು ಸಂಜೆ 4 ಗಂಟೆಗೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ವನ್ಯಜೀವಿ ಸಂರಕ್ಷಕರು ಮತ್ತು ಕಾಳಿಂಗ ಸರ್ಪಗಳ ಸಂರಕ್ಷಣೆ ಮತ್ತು ಸಂಶೋಧಕರಾದ ಡಾ. ಗೌರಿಶಂಕರ್, ಬೆಂಗಳೂರು ಇವರಿಗೆ ವಸುಂಧರಾ ಮಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಯದ #KannadaUniversity ಉಪಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಮತ್ತು ಕಿರ್ಲೋಸ್ಕರ್ ವಸುಂಧರಾ ಸಮಿತಿಯ ಅಧ್ಯಕ್ಷರಾದ ಆರ್.ಆರ್. ದೇಶಪಾಂಡೆ ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಆರ್. ವಿ. ಗುಮಾಸ್ತೆ, ಈ ಚಲನಚಿತ್ರೋತ್ಸವದ ನಿರ್ದೇಶಕರಾದ ವಿರೇಂದ್ರ ಚಿತ್ರವ್, ವಸುಂಧರಾ ಕ್ಲಬ್, ಪುಣೆ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಈ ಚಿತ್ರೋತ್ಸವದಲ್ಲಿ ಪರಿಸರ, ವನ್ಯಜೀವಿ, ಶಕ್ತಿ, ಗಾಳಿ, ನೀರು ಕುರಿತು ಜಾಗೃತಿ ಮೂಡಿಸುವ ದೇಶೀಯ ಹಾಗೂ ವಿದೇಶೀಯ ಖ್ಯಾತ ನಿರ್ದೇಶಕರು ತಯಾರಿಸಿದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿದ ಆಯ್ದ ಚಲನಚಿತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಪರಿಸರ ಸಂರಕ್ಷಿಸುವ ಕುರಿತು ಕಿಂಚಿತ್ತಾದರೂ ಸೇವೆಯನ್ನು ಸಲ್ಲಿಸುವ ದೃಷ್ಠಿಯಿಂದ, ಪುಣೆಯಲ್ಲಿ ಸ್ಥಾಪನೆಗೊಂಡ ವಸುಂಧರಾ ಕ್ಲಬ್ #VasundaraClub ಜೊತೆಗೂಡಿ ಕಿರ್ಲೋಸ್ಕರ್ ವಸುಂಧರಾ ಎಂಬ ವೇದಿಕೆಯಡಿಯಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು #InternationalFilmFestival ಆಯೋಜಿಸುತ್ತ ಬಂದಿದೆ. ಕಳೆದ ಹದಿಮೂರು ವರ್ಷಗಳಿಂದ ದೇಶದ 7 ರಾಜ್ಯಗಳ 30 ನಗರಗಳಲ್ಲಿ ಈ ಚಲನ ಚಿತ್ರವನ್ನು ಆಯೋಜಿಸುತ್ತಿದೆ.
ಕಿರ್ಲೋಸ್ಕರ್ ಕಾರ್ಖಾನೆ ಕುರಿತಾಗಿ
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯು ಪ್ರಪ್ರಥಮವಾಗಿ ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಹತ್ತಿರ 1993 ರಲ್ಲಿ ಸ್ಥಾಪನೆಗೊಂಡಿದೆ. ಪ್ರಮುಖವಾಗಿ ಬೀಡುಕಬ್ಬಿಣ ಮತ್ತು ಬೂದು ಕಬ್ಬಿಣದ ಎರಕಗಳನ್ನು ಉತ್ಪದಿಸುತ್ತಿದೆ. ಈ ಉತ್ಪನ್ನಗಳು ಮುಖ್ಯವಾಗಿ ವಾಹನ ತಯಾರಿಕಾ ವಲಯಕ್ಕೆ ಬಿಡಿಭಾಗವಾಗಿ ಪೂರೈಸಲ್ಪಡುತ್ತವೆ.
ಕಾರ್ಖಾನೆಯು ಸ್ಥಾಪನೆಯಾದಾಗಿನಿಂದಲೂ ಹತ್ತಿರವಿರುವ ಬೇವಿನಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದೆ. ಕಂಪನಿಯ ಸಾಂಸ್ಥಿಕ ಸಮಾಜಿಕ ಹೊಣೆಗಾರಿಕೆಯನ್ನು ಕ್ರಮಬದ್ಧವಾಗಿ ನೆಡೆಸಲು 2001 ರಲ್ಲಿ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟನ್ನು ಸ್ಥಾಪಿಸಲಾಗಿದೆ.
ಈ ಟ್ರಸ್ಟ್ ಮುಖಾಂತರ ಗ್ರಾಮದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಇವುಗಳಿಗೆ ಒತ್ತು ಕೊಟ್ಟು ವಾರ್ಷಿಕ ಯೋಜನೆಯನ್ನು ರೂಪಿಸಿ ಅದರಂತೆ ಕೆಲಸಗಳನ್ನು ಕೈಗೆತ್ತಿಗೆಕೊಳ್ಳುತ್ತಿದೆ. ಈ ಚಟುವಟಿಕೆಗಳಲ್ಲಿ ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವೂ ಒಂದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post