ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಜಿಲ್ಲೆಯ ಹೆಸರಾಂತ ಕಾರ್ಖಾನೆಗಳಲ್ಲಿ ಒಂದಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ Kirloskar Ferrous Industries Ltd., ಕಾರ್ಖಾನೆ 1992ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮವಾಗಿ ಪ್ರಾರಂಭವಾಯಿತು. ಈ ಕಾರ್ಖಾನೆ ಪ್ರಾರಂಭದಿಂದಲೂ ಸುರಕ್ಷತೆ, ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಗಮನ ಹರಿಸಿ, ಉತ್ಪಾದನೆ ಮಾಡುತ್ತ ಪ್ರತಿ ಹಂತದಲ್ಲಿ ಉನ್ನತ ಮಟ್ಟಕ್ಕೆ ಏರಿದೆ. ಅದರಂತೆ ಪ್ರತಿ ವರ್ಷ ಮಾರ್ಚ್ 4 ರಿಂದ 10 ರ ವರೆಗೆ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಮತ್ತು ಸಪ್ತಾಹ ಆಚರಣೆ ಮಾಡುತ್ತಾ ಬಂದಿರುತ್ತದೆ.
ಕಳೆದ ಎರಡು ವರ್ಷದಲ್ಲಿ ಅನುಭವಿಸಿದ ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಸರ್ಕಾರ ಈಗ ಎಲ್ಲ ಕಾರ್ಯಕ್ರಮಕ್ಕೆ ಸಡಿಲತೆ ತೋರಿಸಿರುವ ಕಾರಣ ಮಾ.4ರಿಂದ 10ರವರೆಗೆ ವಿವಿಧ ಕಾರ್ಯಕ್ರಮ, ಸುರಕ್ಷತಾ ತರಬೇತಿ, ಸುರಕ್ಷತಾ ಸಭೆ ಮತ್ತು ವಿವಿಧ ವಿಭಾಗಗಳಲ್ಲಿ ಸಮಾರಂಭ ಆಚರಣೆ ಮಾಡಲಾಯಿತು.
ಮಾ. 5ರಂದು ಕಾರ್ಖಾನೆಯ ಒಳಭಾಗದ ಗುತ್ತಿಗೆದಾರರಾದ ಮೆ. ಸೈಮನ್ ಕಾಂಟ್ಯಾಕ್ಟ್ ಮೂಲಕ ಸುರಕ್ಷತಾ ದಿನಾಚರಣೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಗೂ ಡೂಪಾಂಟ್ ಸಂಸ್ಥೆಯ ಅಧಿಕಾರಿ ಸಂಜಯ್ ಗುಪ್ತ ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳ ಸಮೇತ ಸುರಕ್ಷತಾ ನಡೆಗೆ ಮೂಲಕ ವಿವಿಧ ವಿಭಾಗಗಳಲ್ಲಿ ಇರುವ ಅಸುರಕ್ಷಿತ ಜಾಗಗಳನ್ನು ಗುರುತಿಸಿ ಪಟ್ಟಿ ಮಾಡಿ, ಸಭೆ ಸೇರಿ ಚರ್ಚಿಸಲಾಯಿತು.
7ರಂದು ಕಾರ್ಖಾನೆಯ ಆಡಳಿತ ಕಛೇರಿಯ ಮುಂಭಾಗ 51 ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಸುರಕ್ಷತಾ ಧ್ವಜಾರೋಹಣ ಮತ್ತು ಸುರಕ್ಷತಾ ಪ್ರತಿಜ್ಞೆ ಪಡೆದು ನಂತರ ಕಾರ್ಖಾನೆಯ ಆಡಿಟೋರಿಯಂನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಪಿ .ನಾರಾಯಣ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಕೊಪ್ಪಳ ವಿಭಾಗದ ಸಹಾಯಕ ನಿರ್ದೇಶಕರಾದ ವಿಜಯಕುಮಾರ್ ಸುರಕ್ಷತಾ ಧ್ವಜವನ್ನು ಏರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಮಿಕರಾದ ಅಮೋಘಪ್ಪ ಇವರು ಸುರಕ್ಷತಾ ಪ್ರತಿಜ್ಞೆ ವಿಧಿಯನ್ನು ಭೊದಿಸಿದರು.
ಈ ಸಂದರ್ಭದಲ್ಲಿ ಎರಕ ವಿಭಾಗದ ಹಿರಿಯ ಉಪಾಧ್ಯಕ್ಷ ಸಿ. ರಮೇಶ್ ಮತ್ತು ಬೀಡು ಕಬ್ಬಿಣ ವಿಭಾಗದ ಹಿರಿಯ ಉಪಾಧ್ಯಕ್ಷ ಎಂ.ಜಿ. ನಾಗರಾಜ್, ಉಪಾಧ್ಯಕ್ಷರುಗಳಾದ ಇಂತೂರಿ ಚಂದ್ರಶೇಖರ್, ಜಿ.ಎಸ್. ಕೃಷ್ಣಮೂರ್ತಿ, ಹೆಚ್. ನಾಗರಾಜ್, ಸೀತಾರಾಮರಾವ್, ಕಾರ್ಮಿಕ ಮುಖಂಡರಾದ ಶೇಖಪ್ಪ, ಶರಣಪ್ಪ, ಕಂಠಿ ಬಸವರಾಜ್ ಮತ್ತು ಹಿರಿಯ ಅಧಿಕಾರಿಗಳು, ಉದ್ಯೋಗಿಗಳು, ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸುರಕ್ಷತಾ ದಿನಾಚರಣೆಯನ್ನು ಆಚರಣೆ ಮಾಡುವ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವುದರ ಮೂಲಕ ಜಾಗೃತಿ ಮೂಡಿಸುವ ಒಂದು ಪ್ರಯತ್ನವಾಗಿದೆ ಮತ್ತು ಕಾರ್ಖಾನೆಗಳಲ್ಲಿ ಅಪಘಾತವನ್ನು ತಗ್ಗಿಸಿ, ಶೂನ್ಯ ಅಪಘಾತಕ್ಕೆ ತರುವುದು ಉದ್ದೇಶದಿಂದ ಕಂಪನಿಯ ಆವರಣದಲ್ಲಿ ಮಾ.4ರಿಂದ 10ರವರೆಗೆ ವಿಭಿನ್ನ ರೀತಿಯಲ್ಲಿ 51 ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗುತ್ತಿರುವ ಸಂಧರ್ಭದಲ್ಲಿ ಪ್ರತಿದಿನ ಸುರಕ್ಷತಾ ಪ್ರತಿಜ್ಞೆ, ಸುರಕ್ಷತಾ ಕಾರ್ಯಸ್ಥಾನ ದ ಬಗ್ಗೆ ಒಟ್ಟಾಗಿ ಸೇರಿ ಮಾತನಾಡುವುದು, ವಿಭಾಗಗಳಲ್ಲಿ ಅಸುರಕ್ಷಿತ ಕಾರ್ಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವುದು. ಹಿರಿಯ ಆಡಳಿತ ಅಧಿಕಾರಿಗಳ ಸಮೇತ ವಿಭಾಗಳ ವೀಕ್ಷಣೆ ಮಾಡಿ ಸುರಕ್ಷತೆ ಬಗ್ಗೆ ಸಲಹೆ ಪಡೆಯುವುದರ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ.
ಕಾರ್ಖಾನೆ ಈಗಾಗಲೇ ಉತ್ತಮ ಸುರಕ್ಷತಾ ವಾತಾವರಣ ಮೂಡಿಸಲು ಉದ್ಯೋಗಿಗಳು ,ಕಾರ್ಮಿಕರ ಸಹಕಾರದಿಂದ ಪ್ರತಿದಿನ ಪ್ರಯತ್ನ ಮಾಡಲಾಗುತ್ತಿದೆ. 2016, 2018 ಮತ್ತು 2021 ನೇ ಸಾಲಿನಲ್ಲಿ ಎನ್ ಎಸ್ ಸಿ ಬೆಂಗಳೂರು ವತಿಯಿಂದ ಕಾರ್ಖಾನೆಗೆ ಉತ್ತಮ ಸುರಕ್ಷ ಪುರಸ್ಕಾರ ಪ್ರಶಸ್ತಿಯನ್ನು ಪಡೆಯಲಾಗಿದೆ. ಅದರ ಹಿನ್ನೆಲೆಯಲ್ಲಿ ಮುಂದುವರೆದು ಅತ್ಯುತ್ತಮ ಸುರಕ್ಷ ಕಾರ್ಖಾನೆ ಪುರಸ್ಕಾರ ಪ್ರಶಸ್ತಿಗಾಗಿ ಶ್ರಮಪಡಬೇಕಾಗಿದೆ. ಮತ್ತು ಅಪಘಾತ ರಹಿತ ಕಾರ್ಖಾನೆಯಾಗಲು ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಸುರಕ್ಷತಾ ವಿಭಾಗದ ಅಧಿಕಾರಿಗಳು ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹತ್ತಿರ ಇದ್ದ ವಿ ಎಸ್ ಎಲ್ ಲಿಮಿಟೆಡ್ ಕಾರ್ಖಾನೆಯನ್ನು ಕಳೆದ ಒಂದು ವರ್ಷಗಳ ಹಿಂದೆ ಸ್ವಾಧೀನ ಪಡಿಸಿಕೂಳ್ಳಲಾಗಿದೆ ಈಗ ನಮ್ಮ ಕಾರ್ಖಾನೆಯ ಜೊತೆ ಜೊತೆ ಆ ಕಾರ್ಖಾನೆಯನ್ನು ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಿ ಉತ್ಪಾದನೆಯನ್ನು ತೆಗೆಯಲಾಗುತ್ತಿದೆ. ಎರಡೂ ವಿಭಾಗದ ಉಪಾಧ್ಯಕ್ಷರು ತಮ್ಮ ತಮ್ಮ ವಿಭಾಗದಲ್ಲಿ ಸುರಕ್ಷತೆಗಾಗಿ ಮಾಡಲಾದ ಬದಲಾವಣೆ ಬಗ್ಗೆ ವಿವರವಾಗಿ ತಿಳಿಸಿದರು.
Also read: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಮೂಡಿಸಿದ ಪಂಚರಾಜ್ಯ ಚುನಾವಣಾ ಫಲಿತಾಂಶ
ಸುರಕ್ಷತಾ ವಿಭಾಗದ ಅಧಿಕಾರಿ ರವಿಕುಮಾರ್ ತಮ್ಮ ಸುರಕ್ಷತಾ ವರದಿಯನ್ನು ಎಲ್ಲರಿಗೂ ತಿಳಿಸಿ ಈ ಹಂತದಲ್ಲಿ ಈಗಾಗಲೇ ಕಾರ್ಖಾನೆಯು ಈ ಕಳೆದ ಸಾಲಿನ ವಿವರವಾದ ವರದಿಯನ್ನು ಮಂಡಿಸಿದರು. ಪ್ರತಿ ತಿಂಗಳು ಸುರಕ್ಷತಾ ಅಣಕು ಪ್ರದರ್ಶನ ನಡೆಸುವುದರ ಮೂಲಕ ತಿಳುವಳಿಕೆಯನ್ನು ಹೆಚ್ಚಿಸಲಾಗುತ್ತಿದೆ. ಸುರಕ್ಷತಾ ಸಾಧನ ಸಾಮಾಗ್ರಿಗಳ ಬಳಕೆಯಲ್ಲಿ ಗಣನೀಯವಾಗಿ ಸಾಧನೆಯನ್ನು ಮಾಡಿದೆ.
ಸುರಕ್ಷತೆಗೆ ಮೊದಲ ಆದ್ಯತೆಯ ಫಲವಾಗಿ ಕಾರ್ಖಾನೆಯಲ್ಲಿ ಅಪಘಾತ ತಡೆಯಲು ಶ್ರಮಿಸಲಾಗುತ್ತಿದೆ . ಸುರಕ್ಷತಾ ಸಭೆಗಳನ್ನು ಪ್ರತಿ ತಿಂಗಳು ಆಯೋಜಿಸಿ ಸಭೆಯಲ್ಲಿ ಹೊಸ ಹೊಸದಾದ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಪ್ರತಿ ದಿನ ಪ್ರತಿ ಶಿಪ್ಟ್ ನಲ್ಲಿ ಸುರಕ್ಷತಾ ಪ್ರತಿಜ್ಞೆ ಮತ್ತು ಸುರಕ್ಷತೆ ಬಗ್ಗೆ ಮಾತನಾಡುವ ಹವ್ಯಾಸ ಹೆಚ್ಚಿಸಲಾಗಿದೆ. ಪ್ರತಿ ತಿಂಗಳು ಸುರಕ್ಷ ಆಡಿಟ್ ಮಾಡಿ ವರದಿ ಸಲ್ಲಿಸಿ ಕಾರ್ಯ ಸ್ಥಳದಲ್ಲಿ ಉತ್ತಮ ಸುರಕ್ಷತಾ ವಾತವರಣ ಮೂಡಿಸಲಾಗಿದೆ.ಹೊಸ ದಾಗಿ ಅಗ್ನಿಶಾಮಕ ವಾಹನವನ್ನು ಖರೀದಿಸಿ ಬೆಂಕಿ ಅಪಘಾತ ತಡೆಯಲಾಗುತ್ತಿದೆ. ಎನ್ ಎಸ್ ಸಿ ಬೆಂಗಳೂರು ಇವರಿಂದ ಸುರಕ್ಷತಾ ಆಡಿಟ್ ಮಾಡಿಸಿ ಕ್ರಮಕೈಗೂಳ್ಳಲಾಗಿದೆ.
SHE ವಾಟ್ಸಾಪ್ ಸಮೂಹ ಗುಂಪಿನಲ್ಲಿ ಸುರಕ್ಷತೆಗೆ ಆದ್ಯತೆ ಮತ್ತು ಗಣನೀಯ ಪ್ರಗತಿ ಕಾಣಲಾಗಿದೆ. ದಿನದಿಂದ ದಿನಕ್ಕೆ ರಸ್ತೆಗಳು, ಲೈಟಿಂಗ್, ಹೌಸ್ ಕೀಪಿಂಗ್ ವ್ಯವಸ್ಥೆ ಪ್ರಗತಿಯಿಂದ ಸುರಕ್ಷತೆಗೆ ವರದಾನವಾಗಿದೆ ಮತ್ತು ವಿಭಾಗಗಳಲ್ಲಿ ಸುರಕ್ಷತೆಗಾಗಿ ಹೊಸ ಹೊಸ ಯಂತ್ರಗಳು ಮತ್ತು ಉಪಕರಣಗಳ ಅಳವಡಿಕೆ ಮಾಡಲಾಗಿದೆ ಎಂದು ಸುರಕ್ಷತಾ ಅಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಸಂಧರ್ಭದಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಉದ್ಯೋಗಿಗಳಿಗೆ ಬಹುಮಾನ ಹಾಗೂ ಕಾರ್ಮಿಕರಿಗೆ, ಗುತ್ತಿಗೆ ಕಾರ್ಮಿಕರಿಗೆ ಮತ್ತು ಶಿಶಿಕ್ಷುಕರಿಗೆ ಉತ್ತಮ ಸುರಕ್ಷ ಪ್ರಶಸ್ತಿಗಳನ್ನು ವಿತರಿಸಲಾಯಿತು ಮತ್ತು ಮಾನವ ಸಂಪನ್ಮೂಲ ವಿಭಾಗದಿಂದ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಪ್ರಶಂಸಾಪತ್ರವನ್ನು ನೀಡಲಾಯಿತು.
ಸುರಕ್ಷತಾ ದಿನಾಚರಣೆಯಲ್ಲಿ ಭಾಗವಹಿಸಿದ ಎಲ್ಲಾರಿಗೂ ಸಹಿಯನ್ನು ಹಂಚಿ ಸಂತಸವನ್ನು ಹಂಚಿಕೂಳ್ಳಲಾಯಿತು. ಈ ಸಾಧನೆ ಸದಾಕಾಲವೂ ಮುಂದುವರೆದು ಶೂನ್ಯ ಅಪಘಾತ ತಲುಪಲು ಮುಂದುವರೆಯಬೇಕಾಗಿದೆ. ಬನ್ನಿ ಕೈ ಜೋಡಿಸಿ ಮನೆಯಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಸುರಕ್ಷತೆ ಯಿಂದ ಕಾರ್ಯ ನಿರ್ವಹಿಸಿ, ಮನೆಗೆ ಹಿಂದಿರುಗಿ ಎಂಬ ಘೋಷಣೆಯೊಂದಿಗೆ ಆಯೋಜಿಸಿದ ಸಮಾರಂಭ ಸಂಪನ್ನವಾಯಿತು.
ವರದಿ: ಮುರಳಿಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post