ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ Kirloskar Ferrous Industries ಆವರಣದಲ್ಲಿ ಆಯೋಜಿಸಲಾಗಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಕಾರ್ಯನಿರ್ವಾಹಕ ನಿರ್ದೇಶಕ ಆರ್.ಎಸ್ ಶ್ರೀವತ್ಸನ್ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕಾರ್ಖಾನೆಯ ಆರ್ಥಿಕ ವ್ಯವಸ್ಥೆ ಯಾವರೀತಿ ಬದಲಾಗಿದೆ ಮತ್ತು ಕಾರ್ಖಾನೆ ಇಂದಿನ ಜಾಗತಿಕ ಯಾಂತ್ರಿಕ ಯುಗದಲ್ಲಿ ಕಿರ್ಲೋಸ್ಕರ್ ಪಾತ್ರ ಮತ್ತು ಬೆಳೆದು ನಿಂತ ಹಾದಿಯನ್ನು ವಿವರಿಸಿ, ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪಿ. ನಾರಾಯಣ, ಬೀಡುಕಬ್ಬಿಣ ಘಟಕದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಂ.ಜಿ. ನಾಗರಾಜ್, ಹಿರಿಯ ಅದಿಕಾರಿ ಜಿ.ಎಸ್. ಕೃಷ್ಣಮೂರ್ತಿ, ಪರುಶುರಾಮ್ ನವಲೆ, ಶ್ರೀನಿವಾಸ್, ಕಾರ್ಮಿಕ ಸಂಘದ ಪದಾಧಿಕಾರಿಗಳು ವಿಜಯಭಾಸ್ಕರ್ ರೆಡ್ಡಿ, ಶರಣಪ್ಪ, ಬಸವರಾಜ್ ಕಂಠಿ, ರಮೇಶ್, ಕಾರ್ಮಿಕರು, ಹಿರಿಯ ಅಧಿಕಾರಿಗಳು, ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರು, ಭದ್ರತಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Also read: ದೇಶಾಭಿಮಾನ ಬೆಳೆಸಿಕೊಂಡು ರಾಷ್ಟ್ರೀಯ ಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳಿ: ಶ್ರೀಪಾದ ಬಿಚ್ಚುಗತ್ತಿ ಕರೆ
ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಉದ್ಯೋಗಿ ಮಕ್ಕಳು ಶೇ. 80ಕ್ಕಿಂತ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಸನ್ಮಾನಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಂತರ ಉತ್ತಮ, ಉನ್ನತ ಮತ್ತು ಅತ್ಯುತ್ತಮ ಕೆಲಸ ನಿರ್ವಹಿಸಿ ಸುರಕ್ಷತೆ, ಪರಿಸರ ಮತ್ತು ಆರೋಗ್ಯಕರ ಉತ್ಪಾದನೆ ಮಾಡಲು ಅನುಕೂಲವಾಗುವಂತೆ ಯಶಸ್ವಿ ಕೆಲಸ ನಿರ್ವಹಿಸಿದ ತಂಡಗಳಿಗೆ ಬಹುಮಾನ ನೀಡಿ ಪ್ರಶಸ್ತಿಯನ್ನು ನೀಡಲಾಯಿತು. ನಂತರ ಭದ್ರತಾ ಸಿಬ್ಬಂದಿ, ಆಡಳಿತ ವಿಭಾಗದ ಡ್ರೈವರ್, ಹೌಸ್ ಕೀಪಿಂಗ್ ಕೆಲಸಗಾರಿಗೆ ಬಹುಮಾನ ನೀಡಲಾಯಿತು.
ಸುರಕ್ಷತಾ ವಿಭಾಗದ ಅಧಿಕಾರಿ ಮುರುಳೀಧರ್ ನಾಡಿಗೇರ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post