ಕಲ್ಪ ಮೀಡಿಯಾ ಹೌಸ್
ಕೊಪ್ಪಳ: ತನ್ನ ಕಂಚಿನ ಕಂಠದಿಂದ ಸುಮಾರು 31ವರ್ಷ ಕಾರ್ಣಿಕ ನುಡಿದಿದ್ದ ಮೈಲಾರದ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇಂದು ಬೆಳಿಗ್ಗೆ 5ಗಂಟೆಗೆ ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ಪಾರ್ಶ್ವವಾಯು ಪೀಡಿತನಾಗಿದ್ದ ಮಾಲತೇಶಪ್ಪ ಹಾಗೂ ಕುಟುಂಬ ಬಹಳಷ್ಟು ಸಂಕಷ್ಟವನ್ನು ಎದುರಿಸಿದ್ದರು. ಇವರ ಸಂಕಷ್ಟಕ್ಕೆ ನಾಡಿನ ಭಕ್ತರೆಲ್ಲಾ ಸಹಾಯ ಹಸ್ತಚಾಚುವ ಮೂಲಕ ಮನೆ ನಿರ್ಮಿಸಿಕೊಳ್ಳಲು ನೆರವಾಗಿದ್ದರು. ಆದರೆ ಮನೆ ಪೂರ್ಣಗೊಳ್ಳುವ ಮೊದಲೆ ಮಾಲತೇಶಪ್ಪ ಇಹಲೋಕ ತ್ಯಜಿಸಿದ್ದಾರೆ
ನಿಧನರಾದ ಮಾಲತೇಶಪ್ಪನ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಪ್ರಾರ್ಥಿಸಿದ್ದಾರೆ.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post