ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಕ್ರೌರ್ಯ ಇಡೀ ಜಗತ್ತನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಅಂದಿನ ಕಾಲಘಟ್ಟದೊಳಗ ಅವರು ಜೀವವಿರೋಧಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿರುವುದಿದೆಯಲ್ಲ ಅವರ ಈ ಜೀವಪರ ಕಾಳಜಿಯನ್ನು ನಾವು ಅದೇಷ್ಟು ಸ್ಮರಿಸಿದರು ಕಡಿಮೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಬಸವರಾಜ್ ಶೀಲವಂತರ್ ಹೇಳಿದರು.
ನಗರದ ಹಟಗಾರ ಪೇಟೆ ಬಡಾವಣೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500ನೇ ಜನ್ಮದಿನದ ಅಂಗವಾಗಿ ಭ್ರಾತೃತ್ವ ಸಮಿತಿಯಿಂದ ನಡೆದ ಪ್ರವಾದಿಯವರ ಸೌಹಾರ್ದ ಸಂದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಸವರಾಜ್ ಶೀಲವಂತರ್ ಅವರು ಮುಂದುವರೆದು ಮಾತನಾಡಿದರು.
ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಮೌಡ್ಯತೆ ಹಾಗೂ ಜಾತಿಯತೆ ಅಳಿಯಬೇಕು. ಇಡೀ ಜಗತ್ತು ಹಸಿವು ಮುಕ್ತವಾಗಬೇಕು ಶಾಂತಿ ಸೌಹಾರ್ದತೆ ಉಳಿಯಬೇಕು. ಇವು ಅವರ ಆಶಯವಾಗಿತ್ತು. ಒಳ್ಳೆಯ ಆಲೋಚನೆಗಳು. ವಿಚಾರಗಳನ್ನು ಇಟ್ಟುಕೊಂಡು ದೊಡ್ಡ ಧ್ವನಿ ಎತ್ತಿ ಹೋರಾಟ ಮಾಡಿದಂತವರು ಪೈಗಂಬರ್, ಯಾವುದೇ ಒಂದು ಜಾತಿಗೆಧರ್ಮಕ್ಕೆ ಸೀಮಿತ ಆದವರಲ್ಲ ಅವರು ಜಗತ್ತು ಕಂಡ ಶ್ರೇಷ್ಠ ಮಹಾ ಮಾನವತಾವಾದಿ ಅವರು ಯಾವುದೋ ಒಂದು ಜಾತಿಗೆ ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಅವರ ಮೌಲ್ಯಯುತ ವಿಚಾರಗಳನ್ನು ನಾವು ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಹಾದಿಯಲ್ಲೇ ಸಾಗಬೇಕು ಅಂದಾಗಲೇ ಅವರ ಕುರಿತಾದ ಈ ತರಹದ ಆಚರಣೆಗಳಿಗೆ ಅರ್ಥ ಬರಲಿದೆ ಎಂದು ಹೇಳಿದರು.
ಜನರ ಒಳಿತಿಗಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದವರಲ್ಲಿ ಪ್ರವಾದಿ ಪೈಗಂಬರ್‌ಬುದ್ಧ ಬಸವಣ್ಣ ಹಾಗೂ ಅಂಬೇಡ್ಕರ್ ಆಗಿರಬಹುದು. ಈ ತರಹದವರು ಜಗತ್ತಿಗೆ ತಮ್ಮ ಹೋರಾಟದ ಗೋಸ್ಕರ ತಮ್ಮ ಜೀವ ಮುಡಿಪಾಗಿಟ್ಟಿದ್ದಾರೆ. ಇವರುಗಳನ್ನು ಮನುಷ್ಯರಾದ ನಾವು ಒಂದು ಜಾತಿಗೆ ಧರ್ಮಕ್ಕೆ ಸೀಮಿತ ಗೊಳಿಸುವದಿದೆಯಲ್ಲ ಅದು ಬಹಳ ಬೇಜಾರು ತರುತ್ತದೆ. ಇವತ್ತು ಈ ದೇಶದಲ್ಲಿ ಏನೆಲ್ಲ ಕೆಟ್ಟ ಬೆಳವಣಿಗೆಗಳು ಆಗುತ್ತಿವೆ ಎಂದು ಹೇಳಿದರು.
ಹಟಗಾರ ಪೇಟೆಯ ಮುಸ್ಲಿಮ್ ಪಂಚ ಕಮಿಟಿಯ ಹಿರಿಯ ಮುಖಂಡ ಖಾಸಿಮ್ ಸಾಬ್ ಲೇಬಗೇರಿ ಮಾತನಾಡಿ ಪ್ರವಾದಿ ಮೊಹಮ್ಮದ್(ಸ.ಅ.) ಸಾರಿದಂತಹ ಶಾಂತಿ ಸಂದೇಶಗಳನ್ನು ಮುಸ್ಲಿಮರು ಪಾಲಿಸಿಕೊಂಡು ಬೇರೆ ಧರ್ಮ ಕೂಡ ಸಹಿಷ್ಣತೆಯಿಂದ ಜೊತೆಗೆ ಕರೆದುಕೊಂಡು ನಾವೆಲ್ಲರೂ ಅಣ್ಣ ತಮ್ಮರಾಗಿ ಈ ದೇಶವನ್ನು ಮುನ್ನಡೆಸಿಕೊಂಡು ಹೊಂಟಿದ್ದೇವೆ.ಇಲ್ಲದೆ ಹೋದರೆ ಈ ದೇಶಕ್ಕೆ ಅನಾಹುತ ಕಾದಿದೆ. ಕೋಮುವಾದಿಗಳ ಬಗ್ಗೆ ಎಚ್ಚರ ವಹಿಸಬೇಕು.ಹಬ್ಬಗಳು ಬಂದರೆ ಯಾಕೆ ಬರುತ್ತವೆ ಎಂಬ ಭಯ ಕಾಡುತ್ತದೆ. ಆದರೂ ನಮ್ಮ ಕೊಪ್ಪಳ ನೂರಕ್ಕೆ ನೂರು ಬಹಳ ಉತ್ತಮ.ನಾವೆಲ್ಲರೂ ಒಂದಾಗಿ ಭ್ರಾತೃತ್ವದಿಂದ ಬಾಳೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ,ಅಹಿಂದ ಮುಖಂಡ ಕರೀಮ್ ಪಾಷಾ ಗಚ್ಚಿನ ಮನಿ,ಗಾಳೆಪ್ಪ ಮುಂಗೋಲಿ,ಗವಿ ಹಲಗಿ, ಗೌಸ್ ನೀಲಿ,ಸುಂಕಪ್ಪ ಮೀಸಿ ಮುಂತಾದವರು ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post