ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಸಚಿವ ಶ್ರೀರಾಮುಲು ಅವರ ತಮ್ಮ ಸರಳತೆ ಹಾಗೂ ಜನಪರ ಕಾಳಜಿಯಿಂದಲೇ ಹೆಸರವಾಸಿಯಾದವರು. ಇಂತಹ ಸಚಿವರು ಈಗ ವಾನರ ಸೈನ್ಯದ ಜೊತೆ ಅಕ್ಷರಶಃ ಸಮಯ ಕಳೆದಿದ್ದು, ಅದರ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಪಂಪ ಸರೋವರಕ್ಕೆ ಸಚಿವರು ನಿನ್ನೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿದ್ದ ವಾನರ ಸೈನ್ಯಕ್ಕೆ ಅಂದರೆ ಮಂಗಗಳಿಗೆ ಬಾಳೆ ಹಣ್ಣು ನೀಡಿ ಅವುಗಳನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ಇದರಿಂದ ಸಂತೋಷಗೊಂಡೇ ಏನೋ ಮಂಗಗಳು/ಮುಷ್ಯಗಳು ಸಚಿವರ ತಲೆಯ ಮೇಲೆಯೇ ಹತ್ತಿ ಕುಳಿತು ಬಾಳೆಹಣ್ಣು ತಿಂದವು. ಅಲ್ಲದೇ, ಹಲವಾರು ಮಂಗಗಳು ಒಮ್ಮೆಲೆ ಶ್ರೀರಾಮುಲು ಅವರನ್ನು ಹಣ್ಣಿಗೋಸ್ಕರ ಮುತ್ತಿಕೊಂಡವು.
ಈ ಬಗ್ಗೆ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವರು, ಬಾಳೆ ಹಣ್ಣು ನೀಡಿ, ವಾನರ ಸೈನ್ಯದೊಂದಿಗೆ ಕೆಲ ಸಮಯ ಕಳೆದಿದ್ದು, ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ಈ ವೇಳೆ ಮರಿ ವಾನರಗಳು ತಲೆಯ ಮೇಲೆ ಕುಳಿತು ಆಶೀರ್ವಾದ ನೀಡಿದ್ದನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post