ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಪುಟ್ಟ ಶೆಡ್‌ನಲ್ಲಿ ವಾಸವಿದ್ದ ವೃದ್ಧೆ ಮಹಿಳೆಗೆ 1 ಲಕ್ಷ ರೂ. ವಿದ್ಯುತ್ ಬಿಲ್ ಬಂದಿರುವುದನ್ನು ಕಂಡು ದಿಗ್ಭ್ರಮೆಗೊಂಡಿರುವ ಘಟನೆ ಕೊಪ್ಪಳದ ಭಾಗ್ಯ ನಗರದಲ್ಲಿ ನಡೆದಿದೆ.
ಮಹಿಳೆ ಪ್ರತಿ ತಿಂಗಳು 70 ರಿಂದ 80 ರೂ. ವಿದ್ಯುತ್ ದರ ಪಾವತಿಸುತ್ತಿದ್ದ ಗಿರಿಜಮ್ಮ 1 ಲಕ್ಷ ರೂ. ಮೊತ್ತದ ಬಿಲ್ ನೋಡಿ ಆಘಾತಗೊಂಡು ಈ ಪರಿಸ್ಥಿತಿಯಿಂದ ಪಾರು ಮಾಡುವಂತೆ ಮಾಧ್ಯಮದವರ ಮುಂದೆ ಮನವಿ ಮಾಡಿದರು.
ಮಾಧ್ಯಮದವರು ಇಂಧನ ಸಚಿವರಿಗೆ ಪ್ರಶ್ನಿಸಿದ ಬಳಿಕ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ‘ಮೀಟರ್ ದೋಷದಿಂದ ತಪ್ಪು ಮೊತ್ತ ನಮೂದಿಸಿರುವ ಬಿಲ್ ಪಡೆದಿದ್ದಾಳೆ, ಬಿಲ್ ಪಾವತಿಸುವ ಅಗತ್ಯವಿಲ್ಲ’ ಎಂದರು.
Also read: ಜೂ. 24ರಂದು ಉದಯೋನ್ಮುಖ ಕಲಾವಿದೆ “ಪ್ರಣವಿ ಬೇರಿಕೆ” ಭರತನಾಟ್ಯ ರಂಗಪ್ರವೇಶ
ಸಚಿವರ ಹೇಳಿಕೆ ಬೆನ್ನಲ್ಲೇ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಗೆಸ್ಕಾಂ) ಸಿಬ್ಬಂದಿ ಆಕೆಯ ಶೆಡ್‌ಗೆ ಧಾವಿಸಿದರು. ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ಅವರು ವಿದ್ಯುತ್ ಮೀಟರ್ ಪರಿಶೀಲನೆ ನಡೆಸಿ ತಾಂತ್ರಿಕ ದೋಷ ಎಂದು ಸಮರ್ಥಿಸಿಕೊಂಡರು. ಸಿಬ್ಬಂದಿ ಮತ್ತು ಬಿಲ್ ಕಲೆಕ್ಟರ್‌ಗಳ ತಪ್ಪಿನಿಂದಾಗಿ ಹೆಚ್ಚುವರಿ ಮೊತ್ತದ ನೀಡಲಾಗಿದೆ. ಬಿಲ್ ಪಾವತಿಸುವ ಅಗತ್ಯವಿಲ್ಲ ಎಂದು ಮಹಿಳೆಗೆ ತಿಳಿಸಿದರು. ಸಮಾಧಾನಗೊಂಡ ವೃದ್ಧೆ ಎರಡೂ ಕೈ ಜೋಡಿಸಿ ಅಧಿಕಾರಿ ಹಾಗೂ ಮಾಧ್ಯಮದವರಿಗೆ ಧನ್ಯವಾದ ಅರ್ಪಿಸಿದರು.
ಈ ಘಟನೆಯು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ಜನರು ಹೆಚ್ಚಿಸಿದ ಬಿಲ್‌ಗಳ ಬಗ್ಗೆ ಅತೃಪ್ತರಾಗಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ ಎಲ್ಲ ಮನೆಗಳಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ ಕಾಂಗ್ರೆಸ್ ಸರಕಾರ, ಕಹಿ ಭಾವನೆಯನ್ನು ನೀಗಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ವಿದ್ಯುತ್ ದರ ಏರಿಕೆ ವಿರೋಧಿಸಿ ಕೈಗಾರಿಕಾ ಸಂಸ್ಥೆಗಳು ಬಂದ್‌ಗೆ ಕರೆ ನೀಡಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post