ಕಲ್ಪ ಮೀಡಿಯಾ ಹೌಸ್ | ಕೋಟಾ |
ಕಾಂಪೌಂಡಿನ ಕಬ್ಬಿಣದ ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು 3 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಸಮೀಪದ ರೆಸಾರ್ಟ್’ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಸುಶಾಂತ್(3) ಎಂದು ಗುರುತಿಸಲಾಗಿದೆ.
ಕೋಟತಟ್ಟು ಪಡುಕೆರೆ ಬೀಚ್ ಸಮೀಪವಿರುವ ರೆಸಾರ್ಟ್ ಎದುರಿಗೆ ಸುಶಾಂತ್ ಸಂಜೆ ಆಟವಾಡುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ಸ್ಲೈಡಿಂಗ್ ಗೇಟ್ ಜಾರಿ ಮೈಮೇಲೆ ಬಿದ್ದ ಪರಿಣಾಮ ಆತನ ತಲೆಗೆ ಗಂಭೀರ ಗಾಯವಾಗಿದೆ. ತತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲೇ ಆತ ಮೃತಪಟ್ಟಿದ್ದನು ಎಂದು ವರದಿಯಾಗಿದೆ.
Also read: ಹೊಸನಗರ ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ
ರೆಸಾರ್ಟ್ ಕಬ್ಬಿಣದ ಗೇಟನ್ನು ಸರಿಯಾಗಿ ಜೋಡಿಸದೇ ಇದ್ದುದೇ ಅನಾಹುತಕ್ಕೆ ಕಾರಣ ಎಂದು ಹೇಳಲಾಗಿದೆ. ಕೋಟ ಠಾಣೆ ಎಸ್’ಐ, ಪಿಎಸ್’ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















