ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಹಾಗೂ ಅನುದಾನ ಕೇಂದ್ರ ಸರ್ಕಾರ ನೀಡಿದ್ದು ಎಂದು ಹೇಳುವುದಕ್ಕೆ ಮೋದಿಯೇನು ಅವರಪ್ಪನ ಮನೆಯಿಂದ ತಂದು ಕೊಟ್ಟಿಲ್ಲ ಎಂಬ ಅವಹೇಳನಕಾರಿ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ಅನ್ನಭಾಗ್ಯ ಅಕ್ಕಿ ಹಾಗೂ ಅನುದಾನ ನೀಡಿದ್ದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಬಿಜೆಪಿಗರು ಹೇಳುತ್ತಾರೆ. ಮೋದಿಯೇನು ಅವರಪ್ಪನ ಮನೆಯಿಂದ ತಂದು ಕೊಟ್ಟಿಲ್ಲ. ಹಾಗೆಯೇ ಬಿಜೆಪಿಗರೂ ಸಹ ಅವರಪ್ಪನ ಮನೆಯಿಂದ ತಂದು ಕೊಟ್ಟಿಲ್ಲ ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
Get In Touch With Us info@kalpa.news Whatsapp: 9481252093, 94487 22200
















