ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡುವ ಕಾರ್ಯಕ್ರಮವನ್ನು ಶಾಸಕರ ಭವನದಲ್ಲಿ ಜುಲೈ 2ರಂದು ನೇರ ಪ್ರಸಾರ ಮಾಡಲಾಗುವುದು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಈ ಕುರಿತಂತೆ ಮಾತನಾಡಿರುವ ಅವರು, ತಾಲೂಕಿನಲ್ಲಿ 26 ಸ್ಥಳಗಳಲ್ಲಿ ಡಿಜಿಟಲ್ ಟಿವಿಗಳ ಮೂಲಕ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣವನ್ನು ಜುಲೈ 2ರ ಗುರುವಾರ ದಂದು ವಿಕ್ಷಣೆ ಮಾಡಬಹುದಾಗಿದೆ. ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜೂಮ್ ಆಪ್ ಮೂಲಕ ವಿಕ್ಷಣೆ ಮಾಡಬಹುದಾಗಿದೆ. ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರದ ಮೂಲಕ ಪದಗ್ರಹಣ ಸಮಾರಂಭವನ್ನು ವೀಕ್ಷಿಸಬಹುದಾಗಿದೆ ಎಂದರು.
ಕೆಪಿಸಿಸಿ ಉಸ್ತುವಾರಿ ಕಾರ್ಯಾಧ್ಯಕ್ಷ ಇಕ್ಬಾಲ್ ಅಹಮ್ಮದ್ ಮಾತನಾಡಿ, ಪ್ರತಿಜ್ಞಾನ ದಿನವನ್ನು ಕಾರ್ಯಕರ್ತರ ದಿನವನ್ನಾಗಿ ಆಚರಣೆ ಮಾಡಲಾಗಿದೆ. ಮಾರ್ಚ್ 12ರಂದು ಪದಗ್ರಹಣ ಆಯೋಜಿಸಿಲಾಗಿತ್ತು. ಆದರೆ ಕೋವಿಡ್‌ನಿಂದ ಮುಂದಕ್ಕೆ ಹೋಗಿದ್ದು ಈಗ ಜುಲೈ 2 ರಂದು ನಡೆಯಲಿದೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಿವಿಯ ಮೂಲಕ ವೀಕ್ಷಣೆ ಮಾಡಬಹುದಾಗಿದೆ ಎಂದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post