ಅಬ್ಬಬ್ಬಾ! ದೋಸ್ತಿ-ದೋಸ್ತಿ ಎಂದು ಹೆಗಲ ಮೇಲೆ ಕೈ ಹಾಕಿಕೊಂಡು ಅಕ್ರಮ ಸಂಬಂಧ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೋದಿ ವಿರುದ್ಧ ಹರಿ ಹಾಯ್ದಿದ್ದು ಹೇಗೆ! ಅಗತ್ಯ ವಸ್ತುಗಳ ಬೆಲೆ ಏರಿಕೆಯಾಯಿತು ಎಂದು ಬೊಬ್ಬಿರಿದ ಈ ಎರಡೂ ಪಕ್ಷಗಳು ಈಗ ಮಾಡಿದ್ದೇನು? ನಾಚಿಕೆಯಾಗಬೇಕು…
ನಿನ್ನೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಿರುವ ಸಿಎಂ ಕುಮಾರಸ್ವಾಮಿ, ಹಳೆ ಮೈಸೂರು ಪ್ರಾಂತ್ಯಕ್ಕೆ ಭರ್ಜರಿ ಕೊಡುಗೆ ನೀಡುವ ಜೊತೆಯಲ್ಲಿ, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕಕ್ಕೆ ಭರ್ಜರಿ ಬರೆ ಎಳೆದಿದ್ದಾರೆ. ಅಲ್ಲಿಗೆ, ತಮ್ಮನ್ನು ಬೆಂಬಲಿಸದ ಭಾಗಗಳಿಗೆ ಸುಣ್ಣ ಬಳಿದು, ತಮ್ಮ ತೆನೆ ಹಿಡಿದ ಪ್ರಾಂತ್ಯಗಳಿಗೆ ಬೆಣ್ಣೆ ಸವರುವ ಮೂಲಕ ಮತ ದ್ವೇಷ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ ಎಂಬುದು ಸತ್ಯ.
ಅತ್ಯಂತ ಪ್ರಮುಖವಾಗಿ, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ, ಮೋದಿ ಸರ್ಕಾರ ಈ ಬೆಲೆ ಏರಿಕೆಯನ್ನು ತಡೆಯುವನ್ನು ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದ ಇವರು ಈಗ ಮಾಡಿರುವುದೇನು? ಈ ಎರಡರ ಮೇಲಿನ ಸೆಸ್ ದರ ಏರಿಕೆ ಮಾಡಿದ್ದರ ಫಲವಾಗಿ ಪೆಟ್ರೋಲ್ 1.14 ಹಾಗೂ ಡೀಸೆಲ್ 1.12 ರೂ.ಗಳ ಏರಿಕೆಯಾಗಿದೆ. ಇದೇ ವೇಳೆ, ರಾಜ್ಯದಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆಯಾಡುತ್ತಿರುವ ಬೆನ್ನಲ್ಲೇ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಮತ್ತೊಂದು ಶಾಖ್ ನೀಡಿದ್ದಾರೆ.
ಇಷ್ಟಲ್ಲದೇ ತೆರಿಗೆ ಏರಿಕೆಯ ನಿರ್ಣಯವನ್ನು ಸಮರ್ಥನೆ ಮಾಡಿಕೊಂಡಿರುವ ಕುಮಾರಸ್ವಾಮಿ, ದಕ್ಷಿಣ ಭಾರತದಲ್ಲೇ ನಮ್ಮಲ್ಲಿ ಕಡಿಮೆ ದರವಿದೆ ಎಂದು ಹೇಳಿರುವುದು ಭಂಡತನವೇ ಆಗಿದೆ. ಪೆಟ್ರೋಲ್ ದರ ನವದೆಹಲಿಯಲ್ಲಿ 75.71, ಅರ್ಗಟಲಾದಲ್ಲಿ 71.61, ಗುಜರಾತ್‌ನಲ್ಲಿ 74.92 ರೂ.ಗಳಿವೆ. ಈ ರಾಜ್ಯಗಳೇಕೆ ನಿಮಗೆ ಮಾದರಿಯಾಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿ, ಭಾರತದಲ್ಲೂ ಏರಿಕೆಯಾದರೆ, ಅದು ಮೋದಿ ವೈಫಲ್ಯತೆ, ಅದೇ ನೀವು ಸೆಸ್ ಏರಿಕೆ ಮಾಡಿ ತೈಲ ಬೆಲೆ ಏರಿಕೆಯಾದರೆ ಈ ರೀತಿಯ ಸಮರ್ಥತೆ.. ಆಹಾ!! ಯಾವ ನ್ಯಾಯ ಸ್ವಾಮಿ…?
ತೈಲ ದರ ಏರಿಕೆಯಾದಾಗ ಮೋದಿ ವಿರುದ್ಧ ಮಾತನಾಡುವ ನೀವುಗಳು, ಇನ್ನು ಮುಂದೆ ಅದ್ಯಾವ ನಾಲಿಗೆಯಿಂದ ಮೋದಿಯನ್ನು ತೆಗಳುತ್ತೀರೀ ಹೇಳಿ?
ರೈತರ ಸಾಲಮನ್ನಾ ಮಾಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಲು, ಆ ಹೊರೆಯನ್ನು ರಾಜ್ಯದ ಜನರ ಮೇಲೆ ಪರೋಕ್ಷವಾಗಿ ಹೇರಿರುವ ಕುಮಾರಸ್ವಾಮಿ ಅತ್ತೆ ಆಸ್ತಿಯನ್ನು ಅಳಿಯ ದಾನ ಮಾಡಿ ಕರ್ಣ ಎನಿಸಿಕೊಂಡಂತೆ ಆಗಿದೆ.
ಬಜೆಟ್ ಕುರಿತಂತೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿರುವಂತೆ ಇದು ಅಣ್ತಮ್ಮರ ಬಜೆಟ್ ಎಂಬುದು ಸತ್ಯವೇ ಆಗಿದೆ. ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗಳಿಸಿ ಪ್ರಾಬಲ್ಯ ಸಾಧಿಸಿರುವ ಹಳೆಯ ಮೈಸೂರು ಭಾಗಗಳನ್ನು ಬಂಪರ್ ಘೋಷಿಸಿರುವ ಕುಮಾರಸ್ವಾಮಿ, ದಕ್ಷಿಣ ಕನ್ನಡ, ಬಾಗಲಕೋಟೆ, ಉಡುಪಿ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶೂನ್ಯ ಕೊಡುಗೆ ನೀಡಿದ್ದು, ಉತ್ತರ ಕರ್ನಾಟಕ ಭಾಗಗಳಿಗೆ ಭಿಕ್ಷೆ ಹಾಕಿದಂತೆ ಅಷ್ಟೋ ಇಷ್ಟೋ ಕರುಣಿಸಿದ್ದಾರೆ.
ಪ್ರಾದೇಶಿಕ ಅಸಮಾನತೆಯನ್ನು ಹಾಸುಹೊದ್ದುಕೊಂಡಿರುವ ಈ ಬಜೆಟ್ ಮೂಲಕ, ಬಿಜೆಪಿಯನ್ನು ಬೇಷರತ್ ಆಗಿ ಗೆಲ್ಲಿಸಿರುವ ಕರಾವಳಿ ಭಾಗವನ್ನಂತೂ ಶತ್ರುಗಳ ಪ್ರಾಂತ್ಯದಂತೆ ನಿರ್ಲಕ್ಷಿಸಿರುವುದು ಈ ಭಾಗದ ಜನರಲ್ಲಿ ಆಕ್ರೋಶವನ್ನು ಹುಟ್ಟಿಸಿದೆ.
ಇನ್ನು, ಈಗಾಗಲೇ ಸಾಕಷ್ಟು ಹಿಂದುಳಿದಿರುವ ಉತ್ತರ ಕರ್ನಾಟಕ ಭಾಗದ ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿ ಗೆದ್ದಿದ್ದರು. ಹೀಗಾಗಿ, ಈ ಭಾಗಕ್ಕೆ ಅನ್ಯಾಯವಾಗಲು ಸಾಧ್ಯವಿಲ್ಲ ಎಂಬ ನಿರೀಕ್ಷೆಯಿತ್ತು. ಆದರೆ, ಸಿದ್ದರಾಮಯ್ಯ ಇದ್ದುಕೊಂಡೂ ಸಹ ಒಟ್ಟಾರೆ ಉತ್ತರ ಕರ್ನಾಟಕ ಭಾಗಕ್ಕೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ. ಜೆಡಿಎಸ್ ಪ್ರಾಬಲ್ಯವಿರುವ ಹಳೆಯ ಮೈಸೂರು ಭಾಗಕ್ಕೆ ಮಾತ್ರ ಬಂಪರ್ ದೊರಕಿದೆ ಎಂದರೆ, ಈ ಅಕ್ರಮ ಸರ್ಕಾರದಲ್ಲಿ ಜೆಡಿಎಸ್ ಮುಷ್ಟಿಯಲ್ಲಿ ಕಾಂಗ್ರೆಸ್ ಸಿಲುಕಿದ್ದು, ತೆನೆ ಪ್ರಾಭಲ್ಯವೇ ಬಲವಾಗಿದೆ ಎಂಬುದು ಸಾಬೀತಾಗಿದೆ.
ಒಂದೆಡೆ ಪ್ರಾದೇಶಿಕ ಅಸಮಾನತೆಗೆ ನಾಂದಿ ಹಾಡಿರುವ ಕುಮಾರಸ್ವಾಮಿ, ಲೋಕಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ರೈತರನ್ನು ಮೆಚ್ಚಿಸಲು ಜನಸಾಮಾನ್ಯರ ಮೇಲೆ ಹೊರೆ ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವಲ್ಲಿ ಮಾತ್ರ ದೃಷ್ಠಿ ಕೇಂದ್ರೀಕರಿಸಿರುವ ಸಮ್ಮಿಶ್ರ ಸರ್ಕಾರ, ರಾಜ್ಯದ ಮೇಲಿನ ಸಾಲದ ಹೊರೆಯನ್ನು 39,328 ಕೋಟಿ ರೂ.ಗಳಿಂದ 47,134 ಕೋಟಿ ರೂ.ಗಳಿಗೆ ಹೆಚ್ಚಿಸುವ ಜೊತೆಯಲ್ಲಿ 40,753 ಕೋಟಿ ರೂ. ವಿತ್ತೀಯ ಕೊರತೆಯನ್ನು ತೋರಿಸಿರುವ ಸಾಧನೆ ಮಾಡಿದ್ದಾರೆ. ಹಾಗೆಯೇ ಪ್ರತಿ ನಾಗರಿಕರ ಮೇಲಿನ ಸಾಲವನ್ನು 43,600 ರೂ.ಗಳಿಗೆ ನಿಗದಿ ಮಾಡಿರುವ ಮಹತ್ಕಾರ್ಯವನ್ನು ಕುಮಾರಸ್ವಾಮಿ ಮಾಡಿದ್ದಾರೆ.
ಇನ್ನು, ಬಜೆಟ್‌ನ ಔಚಿತ್ಯವೇ ಪ್ರಶ್ನಾರ್ಥಕವಾಗಿದ್ದು, ಪ್ರಮುಖವಾಗಿ ರೈತರ ಬೆಳೆ ಸಾಲ ಮನ್ನಾಗೆ 34 ಸಾವಿರ ಕೋಟಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಲ ಮನ್ನಾ ಬಾಕಿ 4,165 ಕೋಟಿ ಹಾಗೂ ವೇತನ ಪರಿಷ್ಕರಣೆ 10,508 ಕೋಟಿ ರೂ.ಗಳ ಸವಾಲನ್ನು ಹೊತ್ತಿರುವ ಕುಮಾರಸ್ವಾಮಿ, ಬಂಡವಾಳ ಕ್ರೋಢೀಕರಣಕ್ಕೇ ಒತ್ತು ನೀಡದೇ ಇರುವುದು ಇವರು ಸರ್ಕಾರವನ್ನು ಹೇಗೆ ನಡೆಸುತ್ತಾರೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಮಹತ್ವವಾಗಿ ಗಮನಿಸಬೇಕಾದ ಅಂಶವೆಂದರೆ, ಸಾಲಮನ್ನಾ ಮಾಡಲು ಬೇಕಿರುವ ಮೂಲಗಳ ಕುರಿತಾಗಿಯೇ ಇನ್ನೂ ಸ್ಪಷ್ಟತೆಯಿಲ್ಲ ಎಂದು ಹೇಳಲಾಗಿದೆ. ಬ್ಯಾಂಕುಗಳು ಕೇವಲ ಒಂದು ಆಶ್ವಾಸನೆಗೆ ಒಪ್ಪಿದ್ದು, ಲಿಖಿತ ರೂಪದಲ್ಲಿ ಅಂದರೆ ದಾಖಲೆಗಳಲ್ಲಿ ಒಪ್ಪಂದವಾಗಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಒಂದು ಸಣ್ಣ ಮೊತ್ತಕ್ಕೆ ಮಾತ್ರ ಒಪ್ಪಿದೆ ಎಂದು ಹೇಳಲಾಗಿದ್ದು, ಹತ್ತುಸಾವಿರ ಕೋಟಿಗೆ ಮಾತ್ರ ಒಪ್ಪಿಗೆ ಸೂಚಿಸಿವೆ ಎಂಬ ವಿಚಾರ ತಿಳಿದುಬಂದಿದೆ. ಒಂದು ವೇಳೆ ಈ ವಿಚಾರ ನಿಜವೇ ಆದರೆ, ಉಳಿದ 24 ಸಾವಿರ ಕೋಟಿ ರೂ.ಗಳ ಗತಿಯೇನು? ಅಲ್ಲಿಗೆ ಇವರ ಸಾಲಮನ್ನಾ ಪ್ರಸಂಗದಲ್ಲಿ ಯಾವ ಪರದೆ ಬೀಳಲಿದೆ ಎಂಬ ಪ್ರಶ್ನೆಯೇಳುತ್ತದೆ.
ಒಟ್ಟಾರೆ ಬಜೆಟ್‌ನಲ್ಲಿ ಪ್ರಾದೇಶಿಕ ಅಸಮತೋಲನ ಎನ್ನುವುದು ಎದ್ದು ಕಂಡಿದ್ದು, ಇದು ಅನ್ಯಾಯಕ್ಕೆ ಒಳಗಾಗಿರುವ ಜಿಲ್ಲೆಗಳ ಜನರು ಹಾಗೂ ಜನಪ್ರತಿನಿಧಿಗಳಲ್ಲಿ ತೀವ್ರ ಆಕ್ರೋಶವನ್ನು ಹುಟ್ಟು ಹಾಕಿದೆ. ಈ ಆಕ್ರೋಶ ಶೀಘ್ರದಲ್ಲೇ ಕಿಡಿಯಾಗಿ, ಸ್ಫೋಟಗೊಂಡು, ಸಮ್ಮಿಶ್ರ ಸರ್ಕಾರವನ್ನೇ ಆಹುತಿ ತೆಗೆದುಕೊಂಡರೂ ಆಶ್ಚರ್ಯ ಪಡಬೇಕಿಲ್ಲ.
Discussion about this post