ಶಿವಮೊಗ್ಗ: ಸರ್ಕಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪುತ್ರವಾತ್ಸಲ್ಯದಿಂದಲ್ಲ. ರೈತರ ಸಾಲಮನ್ನಾ ಮಾಡಬೇಕೆಂಬ ಉತ್ಸಾಹ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಇದೆಯಲ್ಲ ಅದನ್ನ ಮೆಚ್ಚಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಇದೆಯಲ್ಲ ಅದನ್ನು ಮೆಚ್ಚಿಕೊಳ್ಳಬೇಕು. ಮೀಟರ್ ಬಡ್ಡಿ ತಪ್ಪಿಸಲು ಇನ್ನು 15 ದಿನಗಳಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಮೊಬೈಲ್ ಬ್ಯಾಂಕ್ ಸ್ಥಾಪಿಸಲಾಗುವುದು ಎಂದರು.
ಕಳೆದ ಮೂರು ತಿಂಗಳಿಂದ ಮೈತ್ರಿ ಸರ್ಕಾರ ಬೀಳುವ ಕುರಿತು ರಾಜ್ಯ ದಲ್ಲಿ ಕುತೂಹಲದಿಂದ ಎದುರು ನೋಡಲಾಗುತ್ತಿದೆಯೇ ವಿನಾ ಸರ್ಕಾರ ರೈತರ ಸಾಲ ಮನ್ನಾ, ಅಭಿವೃದ್ದಿ ಕೆಲಸ, ಬರ ಮತ್ತು ಪ್ರವಾಹದಂತ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯದೆ ಇರುವುದು ದುರಂತ ಎಂದರು.
ಸರ್ಕಾರ ಯಾವಾಗ ಬೀಳಲಿದೆ ಎಂದು ಕಾದು ಕುಳಿತವರಿಗೆ ನಿರಾಸೆ ಕಾಣಲಿದೆ. ಏಕೆಂದರೆ ಸರ್ಕಾರ ಬೀಳುವುದಿಲ್ಲ ಸುಭದ್ರವಾಗಿದೆ. ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷ ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತದೆ. ಅವುಗಳನ್ನು ಅವರೆ ಸರಿಪಡಿಸಿಕೊಳ್ಳಿದ್ದಾರೆ ಎಂದರು.

















