ಕಲ್ಪ ಮೀಡಿಯಾ ಹೌಸ್ | ಪ್ರಯಾಗರಾಜ್ |
ಕುಂಭಮೇಳದ ಕುರಿತಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ #MallikarjunaKharge ವಿರೋಧದ ಮಾತುಗಳನ್ನಾಡಿದ್ದರೆ, ಅದೇ ಪಕ್ಷದ ಪ್ರಮುಖ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ #DKShivakumar ಅವರು ಕುಟುಂಬ ಸಹಿತ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್’ನಲ್ಲಿ #Prayagraj ನಡೆಯುತ್ತಿರುವ ಮಹಾಕುಂಭಮೇಳಕ್ಕೆ #Mahakumbha2025 ಇಂದು ಕುಟುಂಬ ಸಹಿತ ತೆರಳಿದ ಡಿಸಿಎಂ ಶಿವಕುಮಾರ್, ಕುಟುಂಬ ಸಹಿತ ಪಾಲ್ಗೊಂಡು ಪವಿತ್ರ ಸ್ನಾನ ಮಾಡಿದ್ದಾರೆ.
Also Read>> ಇನ್ಮೇಲೆ ನಿಮ್ಮ ಕಿಡ್ನಿ ಸೇಫ್ | ಇದು ಮೆಡಿಕವರ್ ಆಸ್ಪತ್ರೆ ಪ್ಲಾನ್ | ನಿಮಗಾಗಿ ಇಲ್ಲಿದೆ ವಿಶೇಷ ಹೆಲ್ತ್ ಪ್ಯಾಕೇಜ್
ಡಿಸಿಎಂ ಹಂಚಿಕೊಂಡ ಅನುಭವ ಏನು?
ತ್ರಿವೇಣಿ ಸಂಗಮದಲ್ಲಿ #TriveniSangam ಪವಿತ್ರ ಸ್ನಾನ ಮಾಡಿದ ನಂತರ ತಮ್ಮ ಅನುಭವವನ್ನು ಫೋಟೋ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ನದಿಗಳ ಸಂಗಮದಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿ ಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರು ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
ಹರ ಹರ ಮಹಾದೇವ!
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕುಟುಂಬ ಸಮೇತ ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ. pic.twitter.com/LhwwJ0hvpK
— DK Shivakumar (@DKShivakumar) February 9, 2025

ಶಿವಕುಮಾರ್ ಅವರಿಗೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿ ಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಅವರೂ ಕೂಡ ಸಾಥ್ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post