ಕಲ್ಪ ಮೀಡಿಯಾ ಹೌಸ್ | ಕುಂದಗೋಳ |
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಸಿದ್ದುಕೃಷ್ಣ ಕ್ರಿಯೇಷನ್ಸ್ ಸಂಶಿ ರವರ ಬಸವಂತಪ್ಪ ಚ. ಹರಕುಣಿ ಅರ್ಪಿಸುವ ಕುಂದಗೋಳ ಕಲ್ಯಾಣಪುರ ಮಠದ ಲಿಂಗೈಕ್ಯ ಕರ್ತೃ ಶ್ರೀ ಬಸವಣ್ಣಜ್ಜನವರ ಜೀವನಾಧಾರಿತ ಕನ್ನಡ ಭಕ್ತಿಪ್ರಧಾನ ಕಿರುಚಿತ್ರ “ತ್ರಿವಿಧ ದಾಸೋಹಿ ಶ್ರೀಬಸವಣ್ಣಜ್ಜ” ಚಿತ್ರವನ್ನು ಅಭಿನವ ಶ್ರೀ ಬಸವಣ್ಣಜ್ಜನವರು ಲ್ಯಾಪಿಯಲ್ಲಿ ಬಟನ್ ಒತ್ತುವದರ ಮೂಲಕ ಬಿಡುಗಡೆ ಮಾಡಿದರು,
ಅವರು ಕುಂದಗೋಳ ಕಲ್ಯಾಣಪುರ ಮಠಕ್ಕೆ 50 ವರ್ಷ ತುಂಬಿದ ಸುಸಂದರ್ಭದಲ್ಲಿ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಅಭಿನವ ಶ್ರೀಬಸವಣ್ಣಜ್ಜನವರ ಚರಪಟ್ಟಾಧಿಕಾರ ನಿಮಿತ್ಯ ಒಂದು ತಿಂಗಳು ನಡೆದ ಜಾತ್ರಾ ಮಹೋತ್ಸವದ ಬಸವ ಪುರಾಣದ ಬೃಹತ್ ವೇದಿಕೆಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನಗಳ ಮಧ್ಯೆ ವೇದಿಕೆಯಲ್ಲಿ ಬಿಡುಗಡೆ ನಂತರ ತಂಡಕ್ಕೆ ಶುಭಕೋರಿ ಮಾತನಾಡಿದರು.
ಬಸಣ್ಣಜ್ಜನವರ ಕುರಿತು ಚಿತ್ರ ಮಾಡುವದು ಕಷ್ಟದ ಕೆಲಸ. ಅಂಥ ಕೆಲಸವನ್ನು ಈ ತಂಡದವರು ದೃಶ್ಯಗಳ ಮೂಲಕ ಕಣ್ಮುಂದೆ ತಂದು ನಿಲ್ಲುವಂತೆ ಚಿತ್ರಿಸಿದ್ದಾರೆ. ಕಲಾವಿದರು ಇಲ್ಲಿಯವರೇ ಆದರೂ ನೈಜವಾಗಿ ಅಭಿನಯಿಸಿದ್ದಾರೆ. ತಾಂಂತ್ರಿಕವರ್ಗದವರ ಕಾರ್ಯ ಅಚ್ಚುಕಟ್ಟಾಗಿದೆ. ಖಂಡಿತ ಈ ಚಿತ್ರ ಭಕ್ತರ ಮನವನ್ನು ತಲುಪಿ ಗೆಲ್ಲಲಿದೆ ಎಂದರು.
ಶ್ರೀ ಶಿವಪ್ರಸಾದ್ ದೇವರು ಯರನಾಳ ಮಾತನಾಡಿ ಚಿತ್ರ ತಯಾರಿಸಲು ತಂಡ ಸಾಕಷ್ಟು ಶ್ರಮ ವಹಿಸಿದೆ ಎಲ್ಲರೂ ಈ ಚಿತ್ರವನ್ನು “ಸಿದ್ದುಕೃಷ್ಣ ಕ್ರಿಯೇಷನ್ಸ್” ಯ್ಯೂಟ್ಯುಬ್ ಚಾನೆಲ್ ನಲ್ಲಿ ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಿ ಎಂದರು.
ಕಮಡೊಳ್ಳಿ ಲೋಚನೇಶ್ವರ ಮಠದ ಶ್ರೀಗಳು ಹಾಗೂ ಇನ್ನೂ ಹಲವಾರು ಮಠಾಧೀಶರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಿತ್ರ ತಂಡದ ಹಿರಿಯ ಸದಸ್ಯರಾದ ಬಸವಂತಪ್ಪ ಹರಕುಣಿ ಯವರನ್ನು ಸನ್ಮಾನಿಸಿ ಚಿತ್ರ ತಂಡಕ್ಕೆ ಆಶೀರ್ವಾದಿಸಿದರು.
ಕಾರ್ಯಕ್ರಮದಲ್ಲಿ ಚಿತ್ರತಂಡದ ಗೋವಿಂದ್ ಮಾಂಡ್ರೆ, ಸಿದ್ದುಕೃ?, ಪ್ರೇಮಾ ಹಿರೇಮಠ್, ಡಬ್ ಸ್ಮ್ಯಾಶ್ ಕಿಂಗ್ ಮಹೇಶ್ ಗೌಡ ಪಾಟೀಲ್, ಸಹನಾ ನವಲೆ, ಗೋಪಾಲ ಪತ್ತಾರ, ವಿದ್ಯಾಧರ ಸುಂಕದ, ವೀರನಗೌಡ ಹೊಸಮನಿ, ವಿರೇಶ್ ಪ್ರಳಯಕಲ್ಮಠ, ಸಿದ್ಧಲಿಂಗೇಶ, ಮಾ.ಸಾತ್ವಿಕ್ ಢೇಕಣೆ, ಮಾ.ಶಕ್ತಿಪ್ರಸಾದ, ಬೇಬಿ ದೀಕ್ಷಾ ಮುಂತಾದ ಕಲಾವಿದರು ತಂತ್ರಜ್ಞರು ಹಾಜರಿದ್ದರು.
ಭಕ್ತಿಪ್ರಧಾನ ಈ ಕಿರುಚಿತ್ರದ ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ವಂದೇಮಾತರಮ್ ಮುತ್ತು, ಮೂಲಕಥೆ ಅಭಿನವ ಶ್ರೀಬಸವಣ್ಣಜ್ಜನವರು ರಚಿಸಿದ್ದಾರೆ. ಸಂಭಾ?ಣೆ-ಪರಿಕಲ್ಪನೆ ಗೋವಿಂದ್ ಮಾಂಡ್ರೆ. ಸಂಗೀತ ನಿರ್ದೇಶನ ಶ್ರೀರಾಮ್, ವರ್ಣಾಲಂಕಾರ ವಿದ್ಯಾ ಮಾಂಡ್ರೆ. , ವಸ್ತ್ರಾಲಂಕಾರ ಮಂಜುನಾಥ ಹನಸಿಯವರ, ಸಹ ಛಾಯಾಗ್ರಾಹಣ ದಾನೇಶ ಬ.ವಡ್ಡರ, ಸಹ ನಿರ್ದೇಶನ: ಮಂಜುನಾಥ್ ನೆರಕಿಮನಿ. ಸಂಕಲನ ಶ್ರೀನಿವಾಸ್ ಕಲಾಲ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ. ಚಿತ್ರಕಥೆ ನಿರ್ದೇಶನ ಬಸವರಾಜ ಬೀಡನಾಳ ಅವರದಿದ್ದು ನಿರ್ಮಾಪಕರು ಶೇಖರಪ್ಪ ಚ ಹರಕುಣಿ ಆಗಿದ್ದಾರೆ.
ವರದಿ: ಡಾ.ಪ್ರಭು ಗಂಜಿಹಾಳ, ಮೊ:9448775346
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post