ಕಲ್ಪ ಮೀಡಿಯಾ ಹೌಸ್ | ಲಕ್ಕವಳ್ಳಿ |
ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಭದ್ರಾ ಜಲಾಶಯ ತುಂಬುವ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಇಂದು ನಾಲ್ಕು ಕ್ರಸ್ಟ್ ಗೇಟ್’ಗಳ ಮೂಲಕ ನದಿಗೆ ನೀರನ್ನುಹರಿಸಲಾಗುತ್ತಿದೆ.
ಇಂದು ಮುಂಜಾನೆ 9.30ಕ್ಕೆ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ತೆರೆದು ನದಿಗೆ ನೀರನ್ನುಹರಿಸಲಾಯಿತು.

ಜಲಾಶಯದ ನಾಲ್ಕು ಗೇಟನ್ನು ನಾಲ್ಕು ಇಂಚು ಮೇಲಕ್ಕೆ ಎತ್ತರಿಸಿ ಜಲಾಶಯದಿಂದ ನದಿಗೆ ನೀರು ಹರಸಲಾಗಿದೆ. ಗೇಟ್ ತೆರೆದ ತಕ್ಷಣ ರಮಣೀಯ ದೃಶ್ಯವನ್ನು ಕಂಡು ಜನರ ಹರ್ಷೋದ್ಗಾರ ಮಾಡಿ, ಕೇಕೆ ಹಾಕಿ ಸಂಭ್ರಮಿಸಿದರು.

ಇಂದು ಭದ್ರಾ ಜಲಾಶಯಕ್ಕೆ 20,774 ಕ್ಯೂಸೆಕ್ಸ್ ಒಳ ಹರಿವು ಇದೆ. ಈಗ 6 ಸಾವಿರ ಕ್ಯೂಸೆಕ್ಸ್ ಹೊರ ಹರಿವು ಇದೆ. ಮಧ್ಯಾಹ್ನದ ವೇಳೆಗೆ ಹೊರ ಹರಿವು 30 ಸಾವಿರ ಕ್ಯೂಸೆಕ್ಸ್’ಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post