ಸೌದಿ ಅರೇಬಿಯಾ: ಅಲ್ಲಿನ ಇತಿಹಾಸದಲ್ಲೇ ಇದು ಮಹಿಳೆಯರಿಗೆ ಲ್ಯಾಂಡ್ ಮಾರ್ಕ್ ಡೇ… ಇದೇ ಮೊಟ್ಟ ಮೊದಲ ಬಾರಿಗೆ ಇಂದಿನಿಂದ ಅಲ್ಲಿನ ಮಹಿಳೆಯರಿಗೆ ಸ್ವಯಂ ವಾಹನ ಚಾಲನೆ ಮಾಡಲು ಅಧಿಕೃತವಾಗಿ ಅವಕಾಶ ಕಲ್ಪಿಸಲಾಗಿದೆ.
ಮಹಿಳಾ ವಾಹನ ಚಾಲಕರಿಗೆ ನಿಷೇಧ ಹೇರಿರುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಲಾಗಿದ್ದು, ಸಾಮಾಜಿಕ ಸುಧಾರಣೆ ಹಾಗೂ ಮಹಿಳಾ ಸಬಲೀಕರಣ ವಿಚಾರದಲ್ಲಿ ಮಹತ್ವದ ನಿರ್ಧಾರ ಇಂದಿನಿಂದ ಜಾರಿಗೆ ಬರಲಿದೆ.
ಮಹಿಳೆಯರಿಗೆ ಈ ರೀತಿ ನಿಷೇಧ ಹೇರಿರುವ ಕುರಿತಾಗಿ ಸ್ತ್ರೀ ಹೋರಾಟಗಾರರಿಂದ ಭಾರೀ ಪ್ರತಿಭಟನೆಗಳು ನಡೆದವು. ಅಲ್ಲಿನ ರಾಜ ಮೊಹಮದ್ ಬಿನ್ ಸಲ್ಮಾನ್ ಈ ವಿಚಾರದಲ್ಲಿ ನಿರ್ಧಾರ ಕೈಗೊಂಡಿದ್ದು, ವಾಹನ ಚಾಲನಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಸೌದಿ ಟೆಲಿವಿಷನ್ ನಿರೂಪಕಿ ಸಬಿಕಾ ಅಲ್ ದೊಸರಿ, ಇದು ಸೌದಿ ಮಹಿಳೆಯರಿಗೆ ಐತಿಹಾಸಿಕ ದಿನವಾಗಿದ್ದು, ಪ್ರತಿ ಮಹಿಳೆಯೂ ಇಂದಿನ ದಿನ ಸಂತಸದ ದಿನವಾಗಿದೆ ಎಂದಿದ್ದಾರೆ.















