ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೆ ನಿಲ್ದಾಣದ ಬಳಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಎರಡು ಪೆಟ್ಟಿಗೆಗಳನ್ನು ಸ್ಫೋಟಿಸುವ ಮೂಲಕ ತೆರೆಯಲಾಗಿದ್ದು, ತಡರಾತ್ರಿವರೆಗೂ ಕಾರ್ಯಾಚರಣೆ ನಡೆದಿದೆ.
ಎಷ್ಟೊತ್ತಿಗೆ ಸ್ಪೋಟ?
ನಿನ್ನೆ ಸಂಜೆ ಪತ್ತೆಯಾಗಿದ್ದ ಎರಡು ಪೆಟ್ಟಿಗೆಗಳನ್ನು ಸ್ಪೋಟಿಸಿ ತೆರೆಯಲು ಬೆಂಗಳೂರಿನಿಂದ ಆಗಮಿಸಿದ್ದ ಬಾಂಬ್ ನಿಷ್ಕ್ರಿಯ ದಳ ತೀರ್ಮಾನಿಸಿತ್ತು.
ಇದರಂತೆ ತಡರಾತ್ರಿ 2.40 ಕ್ಕೆ ಮೊದಲು ಹಾಗೂ ಬೆಳಗಿನ ಜಾವ 3.24ಕ್ಕೆ ಎರಡನೆಯ ಪೆಟ್ಟಿಗೆಯನ್ನು ಸ್ಪೋಟಿಸಲಾಯಿತು.
ಸ್ಪೋಟಿಸಿದ ಎರಡೂ ಪೆಟ್ಟಿಗೆಗಳಲ್ಲಿ ಎರಡು ಪ್ಲಾಸ್ಟಿಕ್ ಚೀಲದಲ್ಲಿ ಬಿಳಿ ಪೌಡರ್ ಪತ್ತೆಯಾಗಿದ್ದು, ಇವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನಂತರ ನಿಖರ ಮಾಹಿತಿ ತಿಳಿಯಲಿದೆ. ಎರಡು ಬ್ಯಾಗ್ ಬಿಳಿ ಪುಡಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post