ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜಗತ್ತಿನ ಎಲ್ಲೆಡೆ ಹಾಗೂ ಭಾರತದಲ್ಲಿ ಮೋದಿಜಿ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿ ಎನ್ನುವುದು ಇಡಿಯ ಭಾರತೀಯರ ಹೆಮ್ಮೆಯ ವಿಚಾರ.
ಮಹಾಮಾರಿ ಕೊರೋನಾ ವಿರುದ್ಧ ಏಕತೆಯ ಹೋರಾಟಕ್ಕೆ ಸಂಕಲ್ಪ ಮಾಡಿ ದೇಶದ ಪ್ರಜೆಗಳನ್ನು ಒಮ್ಮತದಿಂದ ಹೋರಾಟದ ಹಾದಿಯಲ್ಲಿ ನಡೆಯಲು ಕೈ ಮುಗಿದು ಪ್ರಜೆಗಳ ಬಳಿ ವಿನಂತಿಸಿ ಕೊಂಡ ಪ್ರಜಾಪ್ರಭುತ್ವ ಹೆಮ್ಮೆಯ ನಾಯಕ ನರೇಂದ್ರ ದಾಮೋದರ ದಾಸ್ ಮೋದಿ!
ನಮ್ಮ ಹೆಮ್ಮೆಯ ಭಾರತ ಮಾತೆಯ ಸುಪುತ್ರ – ಮೋದಿ ಅವರಿಗೆ ರಾಷ್ಟ್ರವನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ ಎಂಬುದೇ ಈ ನಾಯಕನ ವಿಶೇಷ.
ಇಂದು ರಾಷ್ಟ್ರಕ್ಕೆ ಬಂದೆರಗಿರುವ ಕೊರೋನಾ ಎಂಬ ಪೆಡಂಭೂತವನ್ನು ಹಿಮ್ಮೆಟ್ಟಿಸುವ 70ರ ಚಿರ ಯುವಕ, ಅವರ ದೇಶದ ಪ್ರಜೆಗಳಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಾ ದೇಶದ ನಾಗರಿಕರಲ್ಲಿ ಮನೆಯಲ್ಲಿ ಇರಿ, ನಿಮ್ಮ ರಕ್ಷಣೆ ಜೊತೆಗೆ ನಿಮ್ಮ ಕುಟುಂಬದ ಸದಸ್ಯರ ರಕ್ಷಣೆ ಮಾಡಿ. ರಾಷ್ಟ್ರ ರಕ್ಷಣೆ ಕಾರ್ಯದಲ್ಲಿ ಕೈ ಜೋಡಿಸಿ ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ಶಂಖ ಊದಿ ಕೊರೋನಾ ವಿರುದ್ಧ ಅಭಿಯಾನಕ್ಕೆ – ಏಕತೆಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದರು.
ಇಂದು ರಾತ್ರಿ 9 ಗಂಟೆ ಗೆ 130 ಕೋಟಿ ಭಾರತೀಯರು ತಮ್ಮ ತಮ್ಮ ಮನೆಗಳಲ್ಲಿ 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಿ, ಎಣ್ಣೆ ಬೆಳಗಿಸಿ, ಮೇಣದ ಬತ್ತಿ ಅಥವಾ ಮೊಬೈಲ್ ಟಾರ್ಚ್‌ಗಳನ್ನು ಬೆಳಗುವ ಮೂಲಕ ದೀಪಾಂದೋಲನಕ್ಕೆ ಸಜ್ಜಾಗಿದ್ದಾರೆ. ನರೇಂದ್ರಮೋದಿಯವರ ಸಂದೇಶವನ್ನು ಪಾಲಿಸಲು ಇನ್ನೂ ಕೆಲವೇ ಗಂಟೆಗಳು ಬಾಕಿ ಉಳಿದಿವೆ.
ಮನೆಗಳ ಹೊರಗೆ, ಬಾಲ್ಕನಿಗಳು, ತರಾಸಿಯ ಮೇಲೆ ಬೆಳಕನ್ನು ಹೊತ್ತಿಸಿ ಒಗ್ಗಟ್ಟು ಸಾರೋಣ, ಸಾಮಾಜಿಕ ಅಂತರದ ಮೂಲ ಮಂತ್ರವನ್ನು ಮರೆಯುವುದು ಬೇಡ, ಕಣ್ಣಿಗೆ ಕಾಣದ ಪೆಡಂಭೂತವನ್ನು ಹಿಮೆಟ್ಟಿಸುವ ಕಾರ್ಯದಲ್ಲಿ ಪಾಲ್ಗುಂಡು ದೇಶದ ಹಿರಿಮೆಯನ್ನು ಎತ್ತಿ ಹಿಡಿಯೋಣ.
ದೇಶ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಎದೆಗೊಂದದೆ, ನಮ್ಮ ರಕ್ಷಣೆಗೆ ಪಣ ತೊಟ್ಟು ನಿಂತಿರುವ ವೈದ್ಯಕೀಯ ತಂಡಕ್ಕೆ, ಆರಕ್ಷಕ ಇಲಾಖೆಗೆ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲು ಹಾಗೂ ಭಗವಂತ ದೇಶದ ಎಲ್ಲಾ ಪ್ರಜೆಗಳ ಹಿತಕ್ಕಾಗಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಟೊಂಕ ಕಟ್ಟಿ ನಿಂತಿದ್ದಾರೆ. ನಾವು ದೇಶದ 130 ಕೋಟಿ ಭಾರತೀಯರು ಭಗವಂತನಲ್ಲಿ ಅವರಿಗೆ ಆರೋಗ್ಯ ಹಾಗೂ ಆಯಸ್ಸು ನೀಡಲಿ ಎಂದು ಪ್ರಾರ್ಥಿಸೋಣ ಹಾಗೂ ಕೊರೋನಾ ಎಂಬ ಪೆಡಂಭೂತವನ್ನು ದೀಪಾಂದೋಲನ ಮಾಡಿ ಅದರ ಪ್ರಖರತೆಯಲ್ಲಿ ನಾಶವಾಗಲಿ ಎಂದು ಆಶಿಸೋಣ.
Get in Touch With Us info@kalpa.news Whatsapp: 9481252093
Discussion about this post