ಮನುಷ್ಯಕುಲಕ್ಕೆ ಹೊಸ ಚೈತನ್ಯ ಮತ್ತು ಸ್ಪೂರ್ತಿ ದೊರೆಯಲು ಕಾರಣವಾಗಿರತಕ್ಕ ಅನೇಕ ವಿಚಾರಗಳಲ್ಲಿ ಹಿಂದುತ್ವ ಅನ್ನುವುದೂ ಒಂದು.
ಈ ಪದಕ್ಕಿರುವ ಅರ್ಥವ್ಯಾಪ್ತಿ, ಸಮುದಾಯಗಳು, ವಿಚಾರಗಳು, ಆದರ್ಶಗಳು, ಪದ್ದತಿಗಳು ಅದೆಷ್ಟು ವೈವಿಧ್ಯಮಯವಾಗಿವೆ, ಶ್ರೀಮಂತಿಕೆಯಿಂದ ಕೂಡಿವೆ, ಎಷ್ಟು ಸೂಕ್ಷ್ಮವಾಗಿವೆ ಮತ್ತು ಬಲಿಷ್ಟವಾಗಿವೆ ಎಂದರೆ ಹಿಂದುತ್ವದ ವ್ಯಾಖ್ಯಾನ, ವಿಶ್ಲೇಷಣೆ ಮಾಡುವುದೇ ಒಂದು ಸವಾಲು ಎನಿಸುತ್ತದೆ.
ಅಂತಹ ಒಂದು ಪರಿಶುದ್ದವಾದ ಸಮುದಾಯವು ಇಂದು ಯಾರದ್ದೋ ರಾಜಕೀಯ ಲಾಭಕ್ಕಾಗಿಯೋ ಅಥಾವ ಇನ್ನಾವುದೋ ಸ್ವಾರ್ಥ ಶಕ್ತಿಗಳ ಸಂತೋಷಕ್ಕಾಗಿಯೋ ಮನಬಂದಂತೆ ಬಳಸಿಕೊಳ್ಳುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ.
ಹಿಂದೊಂದು ಕಾಲವಿತ್ತು. ಜಗತ್ತಿನಲ್ಲಿಯೇ ಶ್ರೀಮಂತ ದೇಶವೆಂದರೆ ಎಲ್ಲರೂ ಭಾರತದೆಡೆಗೆ ಮುಖಮಾಡುತ್ತಿದ್ದರು. ಆ ಕಾಲಘಟ್ಟದಲ್ಲಿ ಹೊರಗಿನಿಂದ ಸಾಕಷ್ಟು ಜನ ನಮ್ಮ ದೋಚಿದರೂ, ಕಂಗೆಡದೆ ನಮ್ಮವರು ಸಮರ್ಥವಾಗಿ ಎದುರಿಸಿದ್ದರು. ಅಂದು ನಮ್ಮೊಳಗೆ ಅಖಂಡತೆಯಿತ್ತು, ಸ್ವಾರ್ಥ ಚಿಂತನೆಗಳಿಲ್ಲದ ಒಗ್ಗಟ್ಟಿತ್ತು.
ಆದರೆ ಇಂದು, ಇದುವರೆಗೂ ಯಾವ ದೇಶದಲ್ಲೂ ಕಂಡು ಕೇಳರಿಯದಷ್ಟು ನಮ್ಮವರೇ ನಮ್ಮ ದೋಚುತ್ತಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಎಂತಹ ನೀಚ ಕೃತ್ಯವನ್ನಾದರೂ ಮಾಡಲು ಹೇಸಲಾರರು. ಅನ್ನುವುದು ನಮ್ಮ ರಾಜಕಾರಣಿಗಳು ಪದೇ ಪದೇ ನಿರೂಪಿಸುತ್ತಿದ್ದಾರೆ.
ಇದಕ್ಕೆ ಮುಖ್ಯ ಉದಾಹರಣೆಯೆಂದರೆ ಸ್ವಾತಂತ್ರ್ಯಾನಂತರ ಮಹಾತ್ಮರು ತಮ್ಮ ಅತಿಯಾದ ಮುಸ್ಲಿಂ ಓಲೈಕೆ ಪ್ರೀತಿಯಿಂದಾಗಿ ಶಿವಭವಾನಿ ಗೀತೆಯ ನಿರ್ಬಂಧಿಸಿ ಮೊದಲ ಬಾರಿಗೆ ಹಿಂದೂ ಸಮಾಜಕ್ಕೆ ದೊಡ್ಡ ಕೊಡಲಿಯೇಟನ್ನೇ ನೀಡಿದರು.
ಕಾಶೀ ಕಿ ಕಲಾ ಜಾತಿ ಮಥುರಾ ಮಸಜೀದ ಹೋತಿ
ಶಿವಾಜಿ ಜೊ ನಾ ಹೋತೇ ತೋ ಸುನ್ನತ್ ಹೋತಿ ಸಬ್ ಕೀ
ಅನ್ನುವ ಶಿವಭವಾನಿ ಗೀತೆಯ ಮುಸಲ್ಮಾನರ ಸಂತುಷ್ಟಿಗೊಳಿಸುವ ಒಂದೇ ಕಾರಣಕ್ಕೆ ನಿರ್ಬಂಧಿಸಿದರು.
ಅಂದಿನಿಂದ ಇಂದಿನವರೆಗೂ ನಿರಂತರವಾಗಿ, ನಿರಂಕುಶವಾಗಿ ದೇಶವನ್ನೇ ಭ್ರಷ್ಟಾಚಾರದಲ್ಲಿ ಮುಳುಗಿಸಿದರು. ಇದೀಗ ಮುಳುಗುತ್ತಿರುವ ಭಾರತದ ಹಿರಿಮೆಯ ಎತ್ತಿಹಿಡಿದು ಮುನ್ನಡೆಸಿ ಮತ್ತದೇ ಭವ್ಯ ಭಾರತವ ನಿರ್ಮಿಸಲು ಒಬ್ಬ ಸಮರ್ಥನಾಯಕ ನಮ್ಮ ಮುಂದಿರುವನು.
ಇಂದಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಒಮ್ಮೆ ಅವಲೋಕಿಸೋಣ.
ಹೊರದೃಷ್ಟಿಯಿಂದ ನೋಡುವುದಾದರೆ ನೋಡುಗರ ಕಣ್ಣಿಗೆ ಭಾರತ ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಬಹುಬೇಗನೇ ಅಭಿವೃದ್ಧಿಯತ್ತ ಸಾಗುತ್ತಿರುವ ದೇಶ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸೂಕ್ತ ನಾಯಕತ್ವ ಈ ಮೂರು ವಿಚಾರದಲ್ಲಷ್ಟೇ ಹೊರಜಗತ್ತಿಗೆ ಭಾರತ ಶ್ರೀಮಂತರಾಷ್ಟ್ರವಾಗಿ ಗೋಚರಿಸುತ್ತದೆ.
ಬಾಹ್ಯಜಗತ್ತಿಗೆ ಮಾದರಿಯಾಗಬಲ್ಲ ಭವ್ಯ ಭಾರತ ತನ್ನ ಗರ್ಭದೊಳಗೆ ಅದೆಷ್ಟೋ ಕಪ್ಪುಕಲೆಗಳ ಹೊತ್ತುಕೊಂಡಿದೆ. ಬಡತನ, ನಿರುದ್ಯೋಗ, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿವೆಯಾದರೂ ನಮ್ಮಲ್ಲಿರುವ ಸಮಸ್ಯೆಗಳೇ ಬೇರೆ.
ಉದಾಹರಣೆಗೆ ಕ್ರೈಸ್ತ ಸಮುದಾಯಗಳಿಗೆ ಅವರ ಪರಂಪರೆಯ ಕುರುಹಾಗಿ ಪವಿತ್ರ ಜೆರುಸಲೇಮ್ ಪಟ್ಟಣವೇ ಇದೆ. ಮುಸಲ್ಮಾನರಿಗಾಗಿ ಮೆಕ್ಕಾನಗರವಿದೆ.
ಹಿಂದೂಸ್ಥಾನದ ಹಿಂದುಗಳಿಗೆ ಯಾವ ನಗರವಿದೆ.
ಕ್ರಿಸ್ತ ಅನುಯಾಯಿಗಳು, ಪ್ರವಾದಿ ಮತದವರು ಹಿಂದೂಜನತೆಯ ಮುಗ್ದತೆಯ ಅದೆಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿರುವರೆಂದರೆ, ಜಗತ್ತಿನಲ್ಲೆಲ್ಲೂ ಇಲ್ಲದಷ್ಟು ಮಸೀದಿ, ಚರ್ಚುಗಳು ಭಾರತದಲ್ಲಿದ್ದರೂ ಭಾರತೀಯ ಹಿಂದುಗಳು ಅಸಹಿಷ್ಣುಗಳು.
ಕೇಸರಿ ಭಯೋತ್ಪಾದನೆ ಅನ್ನುವ ಹಣೆಪಟ್ಟಿಯ ನೀಡಿ ಒಂದು ಧರ್ಮವನ್ನೇ ಹೀಗಳೆವ ಈ ಇಬ್ಬರಲ್ಲಿ ಒಬ್ಬನ ಚಿಂತನೆ ಭಾರತವ ಮತ್ತೊಂದು ಜೆರುಸಲೇಮ್ ಮಾಡೋದಾದರೆ, ಮತ್ತೊಬ್ಬನ ಚಿಂತನೆ ಭಾರತವ ಮತ್ತೊಂದು ಪಾಕಿಸ್ಥಾನವನ್ನಾಗಿ ಮಾಡುವುದು.
ಇನ್ನು ಜಗತ್ತಿನಲ್ಲೆಲ್ಲೂ ಕಾಣಸಿಗದಂತಹ ಅಪ್ರಬುದ್ದ ರಾಜಕಾರಣ. ಇನ್ನೂ ಹಸುಗೂಸುವಿನಂತೆ ವರ್ತಿಸುವ ಮೆದುಳಿಲ್ಲದ (ಬುದ್ದಿ, ಸಾಮರ್ಥ್ಯವಿಲ್ಲದ) ನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಅದೆಂತಹ ದುಸ್ಥಿಗೆ ತಂದುಬಿಟ್ಟರೆಂದರೆ ಇದೇ ಸ್ಥಿತಿ ಮುಂದುವರೆದರೆ ಮುಂದಿನ ಪೀಳಿಗೆ ಭಾರತ ಅನ್ನುವುದ ಬರೀಯ ಭೂಪಟದಲ್ಲಿ ನೋಡುವಂತಾದೀತು.
ಹೊರಗಡೆ ಹೇಳಿಕೊಳ್ಳಲೂ ಅಸಹ್ಯವಾಗುವಂತಹ ರಾಜ್ಯಭಾರವ ನಡೆಸುವ ಹೀನ ಸಂತತಿಗಳ ಅಸಲಿ ಮುಖ ತಿಳಿದೂ ಮೂಕರಂತೆ ವರ್ತಿಸುವ ಪ್ರಜೆಗಳೂ ಕೂಡ ದೇಶದ ಇಂದಿನ ಈ ಸ್ಥಿತಿಗೆ ನೇರ ಕಾರಣಕರ್ತರಾಗಿದ್ದಾರೆ.
ಮೊದಲೇ ಆಂತರಿಕ ಕಲಹಗಳಿಂದ ಕಂಗೆಟ್ಟಿರುವ ಮಾತೆಯ ಮಡಿಲಿಗೆ ತಮ್ಮ ರಾಜಕೀಯ ಲಾಭಕ್ಕಾಗಿ ಅಕ್ರಮ ನುಸುಳುಕೋರರಿಗೆ ಮಣೆಹಾಸಿ ಸ್ವೀಕರಿದ್ದಲ್ಲದೇ ಅವರಿಗೂ ಭಾರತೀಯ ಪೌರತ್ವ ನೀಡಿ ಸತ್ಕರಿಸುವ ರಾಜಕೀಯ ನಾಯಕರು ಅದ್ಯಾವ ರೀತಿಯಿಂದ ಬಡತನ ನಿರ್ಮೂಲನೆ ಮಾಡುವರು?
ದೇಶದೊಳಗಿದ್ದೇ ಭಯೋತ್ಪಾದಕ ಕೃತ್ಯಗಳಿಗೆ ಪೋಷಣೆ ನೀಡುವ ಜಿಹಾದಿಗಳಿಗೆ ರಕ್ಚಣೆ ನೀಡುತ್ತಾ, ದೇಶದಲ್ಲೇನೇ ಆದರೂ ತಮ್ಮ ನಾಲಗೆಯ ಕೇವಲ ಒಂದು ಸಮದಾಯದ ನಾಶಕಷ್ಟೇ ಸೀಮಿತಗೊಳಿಸಿರುವ ಪಟ್ಟಣದ ನಕ್ಸಲ್ ಬುದ್ದಿಜೀವಿಗಳಿಗೆ ಪೋಷಣೆ ನೀಡುತ್ತಾ ನಮ್ಮ ಅನ್ನವ ತಿಂದು ನಮ್ಮ ದೇಶದ ನಾಶವನ್ನೇ ಬಯಸುವ ನಾಯಕರುಗಳು ಬೇಕೇ..
ಭಾರತಕ್ಕೆ ಶರಿಯಾ ಕಾನೂನು ಬೇಕು, ಕಾಂಗ್ರೆಸ್ ಮುಸಲ್ಮಾನರ ಪಕ್ಷ, ಸರ್ಜಿಕಲ್ ಸ್ಟ್ರೈಕನ್ನು ಜುವ್ಲಾ ಸ್ಟ್ರೈಕ್ ಎಂದೆಲ್ಲಾ ಮನಬಂದಂತೆ ಹೇಳಿಕೆ ನೀಡುವ ನಾಯಕರುಗಳಿಗೆ ದೇಶದ ಭದ್ರತೆಗಿಂತ ರಾಜಕೀಯವೇ ಮುಖ್ಯವಾದಂತಿದೆ. ಅಕ್ರಮ ಬಾಂಗ್ಲಾ ವಲಸಿಗರ ಸಾಕುತ್ತಾ, ರೋಹಿಂಗ್ಯಾಗಳ ಪರ ನಿಲ್ಲುತ್ತಾ ತಾವು ಜಾತ್ಯಾತೀತರು ಅಂತ ತೋರಿಸಿಕೊಳ್ಳುವ ಈ ನಾಲಾಯಕರುಗಳು ಮೋದಿಯನ್ನು ವಿರೋಧಿಸುವ ಭರದಲ್ಲಿ, ಮುಂಬರುವ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಎಂತಹ ನೀಚಕೃತ್ಯವನ್ನಾದರೂ ಮಾಡಲು ಸಿದ್ದ ಎಂಬುದ ಪದೇ ಪದೇ ನಿರೂಪಿಸುತ್ತಿದ್ದಾರೆ.
ಮಾತೆಯ ಸೆರಗಿಗೇ ಕೈಹಾಕುವಂತಹ ದೇಶದ್ರೋಹಿಗಳಿಗೆ ಈ ನಾಲಾಯಕರು ಎಷ್ಟರಮಟ್ಟಿಗೆ ಆಶ್ರಯ ನೀಡುತ್ತಿರುವರೆಂಬುದಕ್ಕೆ ರಾಷ್ಟ್ರೀಯ ತಲೆಹಿಡುಕ ಮೀಡಿಯಾವೊಂದು, ಕಾಶ್ಮೀರದಲ್ಲಿ ಸೈನಿಕರು ಹೊಡೆದುರುಳಿಸಿದ ಉಗ್ರರ ಪರವಾಗಿ ನಿಂತು ಕಾಶ್ಮೀರದಲ್ಲಿ ಸ್ಥಳಿಯರನ್ನು ಸೇನೆ ಹೊಡೆದುರುಳಿಸಿದೆ ಎಂಬ ಸುಳ್ಳು ಮಾಹಿತಿಯ ಬಿತ್ತರಿಸಿದೆ.
ಇದಕ್ಕಿಂತಲೂ ದೊಡ್ಡ ಉದಾಹರಣೆಯ ಅವಶ್ಯಕತೆಯಿದೆಯೇ.. ಇಂತಹ ಕುಲಗೆಟ್ಟ ಕಟುಕರ ಕೈಯಿಂದ ದೇಶವ ಬಿಡಿಸಿ, ಮತ್ತೊಮ್ಮೆ ಸಮರ್ಥ ನಾಯಕನಾದ ಮೋದಿಯ ಕೈಗೊಪ್ಪಿಸಿದರಷ್ಟೇ ದೇಶ ಸುಭಿಕ್ಷವಾಗುವುದು.
ಹಗರಣಗಳಿಂದ ಮುಕ್ತವಾಗಿ, ಶೈಕ್ಷಣಿಕ, ವ್ಯವಹಾರಿಕ, ಆರ್ಥಿಕವಾಗಿ ಮುನ್ನುಗ್ಗಿ ಮತ್ತದೇ ಭವ್ಯ ಭಾರತವಾಗಲಿ. ಕಲ್ಮಶಗಳಿಂದ ತುಂಬಿ ನರಕಯಾತನೆ ಅನುಭವಿಸುವ ಭಾರತಮಾತೆಗೆ ಮುಕ್ತಿ ಲಭಿಸಿ ಸದಾ ಹಸಿರುಮಯವಾಗಿರುವ ಕೃಷಿಪ್ರಧಾನ ಭವ್ಯ ಭಾರತವಾಗಲಿ. ಯಾವ ಶತ್ರುವೂ ಕಣ್ಣೆತ್ತಿ ನೋಡಲೂ ಭಯಪಡುವ ಸುಭದ್ರ ರಾಷ್ಟ್ರವಾಗಲಿ.
ಮಾತೆಯ ಸೆರಗಿಗೆ ಕನ್ನ ಹಾಕುವ ಆಂತರಿಕ ಶತ್ರುಗಳ ಧಮನವಾಗಿ ಉತ್ತಮ ಆಡಳಿತದ ಪ್ರಜಾರಾಜ್ಯವಾಗಿ ಹೊರಹೊಮ್ಮಲಿ ನನ್ನ ಭಾರತ ಅನ್ನುವುದೇ ಆರ್ಯಮಾತೆಯ ಪುಟ್ಟ ಕಂದಮ್ಮನಾಗಿ ನಾ ಕಂಡ ಕನಸು.
ನನ್ನ ಕನಸಿಂದು ನನಸಾಗುವ ಹಂತ ತಲುಪಿನಿಂತಿದೆ. ಮತ್ತದೇ ಭವ್ಯಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗೋಣ.
ಕಾಶೀ ಕೀ ಕಲಾ ಜಾತಿ ಮಥುರಾ ಮಸಜೀದ ಹೋತಿ
ಮೋದೀಜಿ ಜೋ ನ ಹೋತೇ ತೋ ಸುನ್ನತ್ ಹೋತಿ ಸಬ್ ಕಿ
ಅಂದು ಯಾರ ಸಂತೋಷಕ್ಕೋ ಮಹಾತ್ಮರು ಶಿವಭವಾನಿ ಗೀತೆಯ ನಿರ್ಬಂಧಿಸಿದರೋ ಮತ್ತೇ ಅದೇ ಸಾಲುಗಳು ಈ ರೀತಿಯಾಗಿ ಇತಿಹಾಸದ ಪುಟಗಳಲ್ಲಿ ಬರೆದಿಡುವಂತಾಗಲಿ.
ದೇಶದ ಪತಾಕೆಯ ವಿಶ್ವಮಟ್ಟದಲ್ಲಿ ಹಾರಿಸಿದ ವಿಶ್ವನಾಯಕ ಮತ್ತೊಮ್ಮೆ ದೆಹಲಿಯ ಗದ್ದುಗೆಯೇರುವಂತಾಗಲಿ…
ವಿಶೇಷ ಲೇಖನ: ಯೋಗಿ, ಸುಳ್ಯ
Discussion about this post