ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮದಲ್ಲಿ #TigerLionSafari ಗಂಡು ಸಿಂಹವೊಂದು ಇಂದು ಮೃತಪಟ್ಟಿದೆ.
18 ವರ್ಷದ ಆರ್ಯ ಎಂಬ ಗಂಡು ಸಿಂಹ #Lion ವಯೋಸಹಜವಾಗಿ ಮೃತಪಟ್ಟಿದ್ದು, ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು ಎಂದು ವರದಿಯಾಗಿದೆ.
ಮೃತ ಸಿಂಹ ಇಡೀ ಸಫಾರಿಯಲ್ಲಿ ಅತ್ಯಂತ ಹಿರಿಯ ಸಿಂಹವಾಗಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ಸರ್ವೇಶ್ ಎಂಬ ಸಿಂಹ ಜಾಂಡೀಸ್ ಕಾಯಿಲೆಯಿಂದ ನರಳಿ ಮೃತಪಟ್ಟಿತ್ತು.

ಇಲಾಖೆಯ ನಿಯಮಾನುಸಾರ ಅರಣ್ಯ ಇಲಾಖೆಯು ಸಿಂಹದ ಮೃತದೇಹವನ್ನು ಅಂತ್ಯ ಸಂಸ್ಕಾರ ನೆರವೇರಿಸಿದೆ. 2008 ರಲ್ಲಿ ಮೈಸೂರು ಮೃಗಾಲಯದಿಂದ ಆರ್ಯ ಸಿಂಹವನ್ನು ಲಯನ್ ಸಫಾರಿಗೆ ತರಲಾಗಿತ್ತು. ಅಕರ್ಷಣೆಯ ಕೇಂದ್ರವಾಗಿತ್ತು.
ಆರ್ಯ ಸಿಂಹದ ಸಾವಿನಿಂದ ಧಾಮದಲ್ಲಿ ಈಗ ಸಿಂಹಗಳ ಸಂಖ್ಯೆ ಐದರಿಂದ ನಾಲ್ಕಕ್ಕೆ ಇಳಿದಿದೆ. ಇದರಲ್ಲಿ ಎರಡು ಗಂಡು ಹಾಗೂ ಎರಡು ಹೆಣ್ಣು ಸಿಂಹಗಳಾಗಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post