ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಭಾನುವಾರದ ಲಾಕ್ ಡೌನ್’ಗೆ ನಗರ ಬಹುತೇಕ ಸ್ಥಬ್ದವಾಗಿತ್ತು.
ಇಂದು ಮುಂಜಾನೆ ಕೆಲವು ಅಗತ್ಯ ವಸ್ತುಗಳು ದೊರೆತವಾದರೂ, ಬಹುತೇಕ 10 ಗಂಟೆ ವೇಳೆಗೆ ನಗರ ಸ್ಥಬ್ದಗೊಂಡಿತ್ತು. ವ್ಯಾಪಾರ- ವಹಿವಾಟುಗಳು, ಅಂಗಡಿ ಮುಂಗಟ್ಟು, ಹೊಟೇಲ್, ಮಾರುಕಟ್ಟೆ ಮುಚ್ಚಿತ್ತು. ಬಸ್, ಟ್ಯಾಕ್ಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರೆ, ಕೆಲವೊಂದು ಆಟೋಗಳು ಮಾತ್ರ ಸಂಚರಿಸುತ್ತಿದ್ದುದು ಕಂಡು ಬಂದಿತು.

ಇನ್ನು, ಲಾಕ್ ಡೌನ್ ಎಂದು ಮೊದಲೇ ಘೋಷಣೆ ಮಾಡಿದ್ದರೂ ಜನರು ಮಾತ್ರ ಅನಾಯಾಸವಾಗಿ ಬೈಕ್ ಹಾಗೂ ಕಾರುಗಳಲ್ಲಿ ತಿರುಗಾಡುತ್ತಿದ್ದುದು ಕಂಡು ಬಂದಿದೆ. ಆದರೆ, ಪೊಲೀಸ್ ಸಿಬ್ಬಂದಿಗಳು ವಾಹನ ಸವಾರರನ್ನು ತಡೆದು ವಿಚಾರಣೆ ಮಾಡಿ, ಮನೆಗಳಿಂದ ಹೊರಕ್ಕೆ ಬಾರದಂತೆ ಎಚ್ಚರಿಕೆ ನೀಡುತ್ತಿದ್ದರು.
Get In Touch With Us info@kalpa.news Whatsapp: 9481252093







