ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರತಿಷ್ಠಿತ ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಜಂಟಿಯಾಗಿ ರಾಜ್ಯದಲ್ಲಿ ಚುನಾವಣಾ ಸಮೀಕ್ಷೆ ನಡೆಸಿದ್ದು, ಬಿಜೆಪಿ-ಜೆಡಿಎಸ್ #BJPJDS ಜಂಟಿಯಾಗಿ ಸ್ವೀಪ್ ಮಾಡಲಿದ್ದು, ಕಾಂಗ್ರೆಸ್’ಗೆ #Congress ಕಳೆಗುಂದಲಿದೆ ಎಂದು ವರದಿ ಮಾಡಿದೆ.
ಒಪೀನಿಯನ್ ಪೋಲ್ ಪ್ರಕಾರ ಬಿಜೆಪಿ-ಜೆಡಿಎಸ್ ಶೇ.55ರಷ್ಟು ಮತ ಪಡೆದರೆ, ಕಾಂಗ್ರೆಸ್ ಶೇ.39ರಷ್ಟು ಪಡೆಯಲಿವೆ ಎನ್ನಲಾಗಿದೆ.
ಬಿಜೆಪಿ-ಜೆಡಿಎಸ್ 23-25 ಸ್ಥಾನಗಳನ್ನು ಹಾಗೂ ಕಾಂಗ್ರೆಸ್ 2-5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದಿದೆ.
ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಗೆಲ್ಲುವ ಸ್ಥಾನಗಳು – ಚಾಮರಾಜನಗರ, ಬಳ್ಳಾರಿ, ಕೋಲಾರ. ಪಿ-ಮಾರ್ಕ್ ಸಮೀಕ್ಷೆಯ ಪ್ರಕಾರ ಬಿಜೆಪಿ-ಜೆಡಿಎಸ್ ಉಳಿದ ಎಲ್ಲಾ ಸ್ಥಾನಗಳನ್ನು ಗೆಲ್ಲುತ್ತದೆ.
ಸಮೀಕ್ಷೆಯ ಅಂಕಿಅಂಶಗಳ ಭವಿಷ್ಯ ನಿಜವಾದರೆ ಬಿಜೆಪಿ-ಜೆಡಿಎಸ್’ಗೆ ದೊಡ್ಡ ಗೆಲುವಾಗಲಿದೆ.
ಕಳೆದು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 26, ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ ಒಂದು ಸ್ಥಾನಗಳನ್ನು ಗೆದ್ದಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post