ಕಲ್ಪ ಮೀಡಿಯಾ ಹೌಸ್ | ಲಂಡನ್ |
ಭಾರತದ ಹದಿನಾಲ್ಕರ ಹರೆಯದ ಸ್ಕ್ವಾಷ್ ಕ್ರೀಡಾಪಟು ಅನಾಹತ್ ಸಿಂಗ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ತನ್ನ 21 ವರ್ಷದ ಎದುರಾಳಿಯನ್ನು ಸೋಲಿಸುವ ಮೂಲಕ 32ನೇ ಸುತ್ತಿಗೆ ತಲುಪಿದ್ದಾರೆ.
Damn this squash game is intresting too. Anahat Singh,a 14 year old girl destroyed her 21 year old opponent in CommenwealthGames Squash match.#CommonwealthGames2022 #squash pic.twitter.com/gYnwXamuuK
— arindam saha (@arindam03405129) July 29, 2022
ಬರ್ಮಿಂಗ್ ಹ್ಯಾಮ್‌ನಲ್ಲಿ Birmingham ನಡೆಯುತ್ತಿರುವ 22ನೇ ಕಾಮನ್‌ವೆಲ್ತ್ ಕ್ರೀಡಾಕೂಟವು Commonwealth Games ಹೆಚ್ಚು ಆಸಕ್ತಿದಾಯಕವಾಗಿದ್ದು, ಅನಾಹತ್ ಸಿಂಗ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್‌ನ ಜಾಡಾ ರಾಸ್‌ರನ್ನು 11-5, 11-2, 11-0 ಸೆಟ್‌ಗಳಿಂದ ಸೋಲಿಸಿದ್ದಾರೆ.

Also read: ಜಿಎಸ್’ಟಿ ಸಂಗ್ರಹದಲ್ಲಿ ಭಾರೀ ದಾಖಲೆ: ಒಂದು ತಿಂಗಳಲ್ಲಿ ಸಂದಾಯವಾದ ಮೊತ್ತ ಎಷ್ಟು ಗೊತ್ತಾ?
ಆರು ವರ್ಷಗಳಲ್ಲಿ 46 ರಾಷ್ಟ್ರೀಯ ಸರ್ಕ್ಯೂಟ್ ಪ್ರಶಸ್ತಿಗಳು, ಎರಡು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಮತ್ತು ಎಂಟು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಅನಾಹತ್ ಬ್ರಿಟಿಷ್ ಜೂನಿಯರ್ ಸ್ಕ್ವಾಷ್ ಓಪನ್ (2019) ಮತ್ತು ಯುಎಸ್ ಜೂನಿಯರ್ ಸ್ಕ್ವಾಷ್ ಓಪನ್ (2021) ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಆಗಿದ್ದಾರೆ. ಆಗಸ್ಟ್ 9ರಂದು ಫ್ರಾನ್ಸ್‌ನ ನ್ಯಾನ್ಸಿಯಲ್ಲಿ 2022ರ ವಿಶ್ವ ಜೂನಿಯರ್ಸ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ಗೆ ಅನಾಹತ್ ಅರ್ಹತೆ ಪಡೆದಿದ್ದಾರೆ.










Discussion about this post