ಅದು ನಿಜಕ್ಕೂ ನಿಜ ಭಾರತೀಯರೆಲ್ಲನ್ನೂ ಸಂತಸದ ಕಡಲಿನಲ್ಲಿ ತೇಲಿಸಿದ, ನಮ್ಮ ನಾಯಕನ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ ಅಪರೂಪದ ಕ್ಷಣಗಳು…
72ನೆಯ ಸ್ವಾತಂತ್ರೋತ್ಸವದ ಅಂಗವಾಗಿ ಇಂದು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶವನ್ನುದ್ದೇಶಿಸಿ ಹರಿಸಿದ ವಾಗ್ಝರಿ ಇಡಿಯ ದೇಶವನ್ನೇ ಮಂತ್ರಮುಗ್ದಗೊಳಿಸಿದ್ದು ಸುಳ್ಳಲ್ಲ.
ತಮ್ಮ ಭಾಷಣ ಮುಗಿಸಿಕೊಂಡು ಹೊರಟ ಮೋದಿಯವರ ಕಾರು ಕೆಂಪು ಕೋಟೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ, ತ್ರಿವರ್ಣ ಧ್ವಜದ ಮಾನವ ಚಿತ್ರದ ರೀತಿಯಲ್ಲಿ ಕುಳಿತಿದ್ದ ಶಾಲಾ ಮಕ್ಕಳ ಸನಿಹ ಪ್ರೀತಿಯಿಂದ ಬಂದರು ಪ್ರಧಾನ ಸೇವಕ.
ಅಷ್ಟೇ…! ಅಲ್ಲಿದ್ದ ಮಕ್ಕಳ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ… ತಮ್ಮ ನೆಚ್ಚಿನ ಮೋದಿ ಅವರನ್ನು ಇಷ್ಟು ಹತ್ತಿರದಿಂದ ನೋಡಿದ ಮಕ್ಕಳು ಸಂಭ್ರಮದಿಂದ ಕೇಕೆ ಹಾಕುತ್ತಾ ಮೋದಿಯವರನ್ನು ಮುತ್ತಿಕೊಂಡರು. ಕೆಲವು ಮಕ್ಕಳು ಕೈ ಕುಲುಕಿದರೆ, ಮತ್ತೆ ಕೆಲವು ಮಕ್ಕಳು ಕೈ ಮುಗಿದರು. ಆದರೆ, ಬಹುತೇಕ ಮಕ್ಕಳು ಮೋದಿ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು.
ಚಿಕ್ಕ ಮಕ್ಕಳ ಈ ಅಪಾರವಾದ ಪ್ರೀತಿಯನ್ನು ಕಂಡು ಮೋದಿ, ಒಂದು ಕ್ಷಣ ಭಾವುಕರಾಗಿದ್ದು, ಪ್ರೀತಿ ಉಮ್ಮಳಿಸಿ ಬಂದಿದ್ದು ಅವರ ಮುಖದ ಭಾವನೆ ಹಾಗೂ ನಗುವಿನಲ್ಲಿ ಕಾಣುತ್ತಿತ್ತು.
ಆದರೆ, ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ತಮಗೂ ಸಾಮಾನ್ಯ ಪ್ರಜೆಗಳಿಗೂ ನೇರ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದ ಹಲವು ಪ್ರಧಾನಿಗಳನ್ನು ಕಂಡ ದೇಶದಲ್ಲಿ, ಇಂದು ಚಿಕ್ಕ ಮಕ್ಕಳಲ್ಲೂ ಸಹ ಮೋದಿಯವರನ್ನು ಕಂಡರೆ ಅದೆಂತಹ ಪ್ರೀತಿ!
ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ವಿಶ್ವವೇ ಭಾರತವನ್ನು ನೋಡುವ ದೃಷ್ಠಿಕೋನವನ್ನು ಬದಲಾಯಿಸಿಕೊಂಡಿದೆ. ಇನ್ನು, ದೇಶದ ಯುವಕರಿಂದ ಮುದುಕರವರೆಗೂ ಬಹುತೇಕ ದೇಶವಾಸಿಗಳಲ್ಲಿ ದೇಶ ಪ್ರೇಮ, ನಂಬಿಕೆ ಇಮ್ಮಡಿಗೊಂಡಿದೆ. ಆದರೆ, ಚಿಕ್ಕ ಮಕ್ಕಳಲ್ಲೂ ಸಹ ಈ ರೀತಿಯಲ್ಲಿ ಪ್ರೀತಿ ಹುಟ್ಟು ಹಾಕಿರುವ ದೇಶ ಕಂಡ ಅಪರೂಪದ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಹೊರತಾಗಿ ಬೇರಿನ್ನಾರೂ ಅಲ್ಲ.
#WATCH PM Narendra Modi meets children at Red Fort, earlier today #IndependenceDayIndia pic.twitter.com/SD599L19Ab
— ANI (@ANI) August 15, 2018
ಇಂತಹ ಪ್ರಧಾನಿಯವರನ್ನು ಪಡೆದ ನಾವೇ ಧನ್ಯರು…
ಈ ದೃಶ್ಯವನ್ನು ಕಂಡ ನಂತರ ಹೆಮ್ಮೆಯಿಂದ ಹೇಳುತ್ತೇನೆ: ‘ನಾನು ಮೋದಿ ಭಕ್ತ’
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post