ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾಗೆ ನೀಡಿದ ಭೇಟಿ ಐತಿಹಾಸಿಕವಾಗಿತ್ತು. ಅದರಲ್ಲೂ ತಮ್ಮ ಈ ಭೇಟಿಯ ವೇಳೆ ಉಗಾಂಡಾಗೆ ಮೋದಿ ಭೇಟಿ ನೀಡಿದ್ದರು.
ಇದೇ ಮೊದಲ ಬಾರಿಗೆ ಉಗಾಂಡಾಗೆ ಭೇಟಿ ನೀಡಿದ್ದ ನರೇಂದ್ರ ಮೋದಿ ಭಾರತ ಹಾಗೂ ಉಗಾಂಡಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವೃದ್ಧಿಸುವಲ್ಲಿ ಮಹತ್ವ ಹೆಜ್ಜೆಯನ್ನಿಟ್ಟಿದ್ದಾರೆ.

ಇನ್ನು, ಪ್ರಧಾನಿ ಮೋದಿಯವರು ಉಗಾಂಡಾಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದ ವೇಳೆ ಇಡಿಯ ಉಗಾಂಡಾ ಸರ್ಕಾರ ಸಂಭ್ರಮ ಹಾಗೂ ಸಂತಸದಲ್ಲಿ ಮುಳುಗಿತ್ತು.
ಜಾಗತಿಕ ಮಟ್ಟದಲ್ಲಿ ಮೋದಿಯವರಿಗೆ ದೊರೆತ ಗೌರವವೇ ಉಗಾಂಡಾದಲ್ಲೂ ಸಹ ದೊರೆತಿದ್ದು, ಭಾರತದ ಪ್ರಧಾನಿಯವರನ್ನು ಸ್ವಾಗತಿಸಲು ಕಾತರದಿಂದ ಕಾದಿತ್ತು.

ಉಗಾಂಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಸ್ವಾಗತಿಸುವ ಕಾತರ ಹಾಗೂ ಸಂಭ್ರಮ ಹೇಗಿತ್ತು ಎನ್ನುವುದನ್ನು ಅಲ್ಲಿನ ಸ್ಥಳೀಯ ಮಾಧ್ಯಮ ಸಂಪೂರ್ಣ ವರದಿ ಮಾಡಿದ್ದು, ಈ ವೀಡಿಯೋ ನೋಡಿದರೆ ನಮ್ಮ ಪ್ರಧಾನಿಯವರ ಮೇಲಿನ ಪ್ರೀತಿ ಹಾಗೂ ಗೌರವ ಹೆಚ್ಚಾಗುತ್ತದೆ.
ವೀಡಿಯೋ ನೋಡಿ:

















