ನವದೆಹಲಿ: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಮುಸ್ಲಿಂ ಬಾಹುಳ್ಯವಿರುವ ಬಾಂಗ್ಲಾದೇಶದ ಉತ್ತರ ಭಾಗದಲ್ಲಿ ಸುಮಾರು ಹಿಂದೂಗಳ ಆರಾಧ್ಯ ದೈವ ವಿಷ್ಣು ದೇವರ 70 ಕೆಜಿ ತೂಕದ ವಿಗ್ರಹ ದೊರೆತಿರುವುದು ಕುತೂಹಲ ಮೂಡಿಸಿದೆ.
ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 203 ಕಿಮೀ ದೂರದಲ್ಲಿರುವ ಪ್ರದೇಶದಲ್ಲಿ ದೊರೆತಿರುವ ಈ ವಿಗ್ರಹ, ಕೋಟ್ಯಾಂತರ ರೂ. ಬೆಲೆಬಾಳುತ್ತದೆ ಎಂದು ವರದಿಯಾಗಿದೆ.
ಇನ್ನು, ಅಲ್ಲಿನ ಖಜಾನೆ ಇಲಾಖೆಯ ವಶಕ್ಕೆ ಈ ವಿಗ್ರಹವನ್ನು ನೀಡಲಾಗಿದ್ದು, ಇದನ್ನು ಭಾರತ ಸರ್ಕಾರದ ವಶಕ್ಕೆ ಪಡೆಯಲಾಗುತ್ತದೆ ಎಂಬ ಕುರಿತಾಗಿ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.
Discussion about this post