ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಕೊತ ಕೊತ ಕುದಿಯುತ್ತಿದ್ದ ಸಂಬಾರ್ ಪಾತ್ರೆಯಲ್ಲಿ ಬಿದ್ದ ಐದು ವರ್ಷದ ಬಾಲಕನೊಬ್ಬ ಧಾರಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಕರಣಪುರದ ಸುತಾರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಬಾಲಕನನ್ನು ಪ್ರಶಾಂತ್ (5) ಎಂದು ಗುರುತಿಸಲಾಗಿದೆ.
ಮೃತ ಬಾಲಕನ ತಂದೆ ದುಶೀಲ್ ಸಿಂಗ್ ರೈತರಾಗಿದ್ದು, ಮುಂಡನ್ ಕಾರ್ಯದ ನಿಮಿತ್ತ ಅಡುಗೆ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿಯೇ ಆಡುತ್ತಿದ್ದ ಬಾಲಕ ತಿಳಿಯದೇ ಬಿಸಿ ಪಾತ್ರೆಗೆ ಜಿಗಿದಿದ್ದಾನೆ. ಪಾತ್ರೆಯಲ್ಲಿ ಬಿದ್ದಾಕ್ಷಣ ಆತನ ಕಿರುಚಾಟ ಕೇಳಿ ಅಲ್ಲಿದ್ದವರು ಓಡಿ ಬಂದು ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಾಗಿಸುತ್ತಿದ್ದ ವೇಳೆ ದಾರಿಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















