ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಪೊಲೀಸರಿಗೆ ಸಿಗದೇ ತಲೆ ತಪ್ಪಿಸಿಕೊಂಡಿದ್ದ ಆರೋಪಿಯ ಮನೆಯ ಮುಂದೆ ಬುಲ್ಡೋಜರ್ ತಂದು ನಿಲ್ಲಿಸಿದ ನಂತರ ಆತ ಶರಣಾಗಿರುವ ಘಟನೆ ನಡೆದಿದೆ.
ಏನಿದು ಘಟನೆ?
ಮಾರ್ಚ್ 19 ರಂದು ಪ್ರತಾಪ್’ಗಢ್ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಮಹಿಳೆ ಪತಿಯೊಂದಿಗೆ ಕಾಯುತ್ತಿದ್ದರು. ಈ ವೇಳೆ ಪತಿ ಮಹಿಳೆಯನ್ನು ಒಂಟಿಯಾಗಿ ಬಿಟ್ಟು ಚಹಾ ಖರೀದಿಸಲು ಹೋಗಿದ್ದರು. ಈ ವೇಳೆ ಆರೋಪಿ ಮಹಿಳೆಯ ಬಳಿಗೆ ಬಂದು ಕೀಲಿಯನ್ನು ನೀಡಿ, ಪಾರ್ಕಿಂಗ್ ಬಳಿ ಇರುವ ಸ್ವಚ್ಛ ಶೌಚಾಲಯಕ್ಕೆ ಹೋಗಿ ಬಳಸಬಹುದೆಂದು ತಿಳಿಸಿ ಆಕೆಗೆ ಕೀಲಿಯನ್ನು ನೀಡಿದ್ದನು. ನಂತರ ಹೊರಗೆ ನಿಂತು ಕಾಯುತ್ತಿದ್ದ ಆರೋಪಿ, ಮಹಿಳೆ ಶೌಚಾಲಯಕ್ಕೆ ಪ್ರವೇಶಿಸಿದ ಕೂಡಲೇ ಆಕೆಯ ಮೇಲೆ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದನು.
ಪ್ರಕರಣ ಸಂಬಂಧ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅತ್ಯಾಚಾರ ನಡೆಸಿರುವುದು ಸಾಬೀತಾಗಿತ್ತು. ಹೀಗಾಗಿ, ಅರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಆದರೆ, ಆತ ಸಿಗದೇ ತಲೆ ತಪ್ಪಿಸಿಕೊಂಡು ಪೊಲೀಸರಿಗೆ ಆಟಾಡಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಸೂಪರ್ ಐಡಿಯಾ ಮಾಡಿದ ಪೊಲೀಸರು, ಆತನ ಮನೆ ಮುಂದೆ ಬುಲ್ಡೋಜರ್ ತಂದು ನಿಲ್ಲಿಸಿ, ೨೪ ಗಂಟೆಯೊಳಗೆ ಶರಣಾಗದಿದ್ದರೆ ಮನೆಯನ್ನು ನೆಲಸಮ ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶ ಹೊರಡಿಸಿದ್ದರು. ಈ ವಿಷಯ ತಿಳಿದ ಆರೋಪಿ ನೇರವಾಗಿ ಪೊಲೀಸರ ಮುಂದೆ ಬಂದು ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ.
Also read: ರಾಷ್ಟ್ರದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯ ಪ್ರೊ. ಗಿರೀಶ್’ಗೆ ಮೂರನೆಯ ಸ್ಥಾನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post