ಕಲ್ಪ ಮೀಡಿಯಾ ಹೌಸ್ | ಲಕ್ನೋ |
ತಾಳಿ ಕಟ್ಟಿದ ಪತ್ನಿಯನ್ನೇ ತನ್ನ ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಕೊಂದ ಪತಿ ತಾನೂ ಮಹಡಿಯಿಂದ ಜಿಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಘಟನೆಯಲ್ಲಿ ಪತ್ನಿ ಶಿವಾನಿ ಕಪೂರ್(43) ಅವರನ್ನು ತನ್ನ ಇಬ್ಬರು ಮಕ್ಕಳ ಎದುರಿನಲ್ಲೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಲ್ಲದೇ, ತಾನೂ ಸಹ ಮೊದಲ ಮಹಡಿಯಿಂದ ಜಿಗಿದಿದ್ದಾನೆ. ಈತನ ಸ್ಥಿತಿ ಸದ್ಯ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಶಿವಾನಿ ಕಪೂರ್ ಮತ್ತು ಆದಿತ್ಯ ಕಪೂರ್ ಮದುವೆಯಾಗಿ 14 ವರ್ಷಗಳಾಗಿದ್ದು, ಇತ್ತೀಚಿಗೆ ಅವರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಸುಮಾರು ಆರು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
Also read: ಶಿವಮೊಗ್ಗ ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್’ನಲ್ಲಿ ವಿಶ್ವದ ಟಾಪ್ ಫ್ರೀಸ್ಟೈಲ್ ಫುಟ್ಬಾಲರ್ ಜೆಮಿ ನೈಟ್
ಇಬ್ಬರೂ ಪ್ರತ್ಯೇಕ ಫ್ಲಾಟ್’ನಲ್ಲಿ ವಾಸಿಸುತ್ತಿದ್ದರು. ಆದರೆ ಪತಿ ಆದಿತ್ಯ ಕುಡಿದ ಅಮಲಿನಲ್ಲಿದ್ದ ತನ್ನ ಪತ್ನಿಯ ಫ್ಲಾಟ್’ಗೆ ಬಂದಾಗ ಈ ಘಟನೆ ನಡೆದಿದೆ. ಆರಂಭದಲ್ಲಿ, ಶಿವಾನಿ ಬಾಗಿಲು ತೆರೆಯಲು ನಿರಾಕರಿಸಿದ್ದಾಳೆ. ಆದರೆ ಆದಿತ್ಯ ತಮ್ಮ ಮಕ್ಕಳನ್ನು ನೋಡಬೇಕೆಂದು ಕಿರುಚಲು ಪ್ರಾರಂಭಿಸಿದಾಗ ಆಕೆ ಅಂತಿಮ ಬಾಗಿಲು ತೆರೆದಿದ್ದಾಳೆ. ಮಾತಿನ ಚಕಮಕಿ ನಡೆದು ಆದಿತ್ಯ ಕೋಪದ ಭರದಲ್ಲಿ ಅಡುಗೆ ಚಾಕುವಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಇದನ್ನು ತಿಳಿದ ಅಪಾರ್ಟ್’ಮೆಂಟ್’ನ ಇತರ ನಿವಾಸಿಗಳು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















