ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಫೇಮಸ್ ಆಗುವ ಉದ್ದೇಶದಿಂದ ಅಂಡರ್ ಪಾಸ್ ಅಡ್ಡಗಟ್ಟಿ, ಟ್ರಾಫಿಕ್ ಜಾಮ್ ಮಾಡಿ ರೀಲ್ಸ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಪುಂಡರಿಗೆ ಉತ್ತರ ಪ್ರದೇಶ ಪೊಲೀಸರು ಸಖತ್ ಆಗಿ ಬಿಸಿ ಮುಟ್ಟಿಸಿದ್ದಾರೆ.
NOIDA
नोएडा की सड़कों पर स्टंट बाजी ,जान जोखिम में डालकर रील बनाने के लिए युवा पीढ़ी जमकर कर रही स्टंट बाजी , वीडियो में दर्जनों गाड़ियां अंडरपास फ्लाईओवर के नीचे बीच सड़क पर खड़ी कर बना रहे रील , वायरल वीडियो सेक्टर 52 बताया जा रहा।@noidapolice @uptrafficpolice @Uppolice pic.twitter.com/XFDEJOUs0A— निशान्त शर्मा (भारद्वाज) (@Nishantjournali) July 7, 2023
ಇಲ್ಲಿನ ನೋಯ್ಡಾದಲ್ಲಿ ಯುವಕರ ಗುಂಪೊಂದು ರೀಲ್ಸ್ ಮಾಡಲು ಸೆಕ್ಟರ್ 52 ಪ್ರದೇಶದ ಅಂಡರ್ ಪಾಸ್’ನಲ್ಲಿ ರಸ್ತೆ ಅಡ್ಡಗಟ್ಟಿ ಟ್ರಾಫಿಕ್ ಜಾಮ್ ಮಾಡಿದ್ದರು. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಕಿರಿಕಿರಿ ಉಂಟಾಗುತ್ತಿತ್ತು.
ಟೊಯೋಟಾ ಫಾರ್ಚುನರ್, ಮಾರುತಿ ಸುಜುಕಿ ಬ¯ನೋ, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಕ್ರೆಟಾದಂತಹ ವಾಹನಗಳನ್ನು ಬಳಸಿ ಬಿಟ್ಟಿ ಶೋಕಿ ಮಾಡಿದ್ದಾರೆ. ಅದು ಕೂಡ ರಸ್ತೆಯನ್ನು ಅಡ್ಡಗಟ್ಟಿ ಇತರ ವಾಹನ ಸವಾರರಿಗೆ ಸಂಚರಿಸಲು ಅಡ್ಡಿಪಡಿಸಿದ್ದಾರೆ. ಇದರಿಂದ ಕೆರಳಿದ ಅಲ್ಲಿನ ಸಾರ್ವಜನಿಕರು ಯುವಕರ ಗುಂಪಿನ ಪುಂಡಾಟವನ್ನು ವೀಡಿಯೋ ಮಾಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
Also read: ಹೊಳೆಹೊನ್ನೂರಿಗೆ ಉತ್ತರಾದಿ ಮಠದ ಸತ್ಯಾತ್ಮ ತೀರ್ಥರ ಪುರಪ್ರವೇಶ: ಚಾತುರ್ಮಾಸ್ಯ ವ್ರತ ಸಂಕಲ್ಪ
ಪೊಲೀಸರ ಗಮನಕ್ಕೆ ತಂದ ಸಾರ್ವಜನಿಕರು ಟ್ವಿಟರ್’ನಲ್ಲಿ ಅದನ್ನು ಟ್ಯಾಗ್ ಮಾಡಿ ವೈರಲ್ ಮಾಡಿದ್ದಾರೆ. ಈ ಟ್ವೀಟ್’ಗೆ ತತಕ್ಷಣ ಪ್ರತಿಕ್ರಿಯಿಸಿದ ನೋಯ್ಡಾ ಪೊಲೀಸರು ಯುವಕರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ಬರೋಬ್ಬರಿ 12,500 ರೂ. ದಂಡ ವಿಧಿಸಿದ್ದಾರೆ.
ದಂಡದ ಬಳಿಕ ನೋಯ್ಡಾ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದು, ಮೇಲಿನ ದೂರಿನ ಆಧಾರದ ಮೆಲೆ ನಿಯಮಗಳ ಪ್ರಕಾರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಬಂಧಪಟ್ಟ ವಾಹನಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇಂತಹ ವಿಡಿಯೋಗಳು ಕಂಡುಬಂದಲ್ಲಿ ತಮ್ಮ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post