ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ತಿಮ್ಮಯ್ಯ ಅವರ ಮೊಮ್ಮಗಳು ಅಮೃತಾ ಸಂತೋಷ್ ಅವರು ಭೇಟಿ ನೀಡಿ ಸ್ಮಾರಕ ಭವನ ವೀಕ್ಷಿಸಿದರು.
ಇದೇ ಮೊದಲ ಬಾರಿಗೆ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಅಮೃತಾ ತನ್ನ ಅಜ್ಜ ತಿಮ್ಮಯ್ಯ ಅವರ ಸ್ಮರಣಾರ್ಥ ಸರ್ಕಾರ ರೂಪಿಸಿದ ಸಂಗ್ರಹಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಇಲ್ಲಿನ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು. ಅಮೃತಾ ಅವರು ಜನರಲ್ ತಿಮ್ಮಯ್ಯ ಮಗ ಮೇಜರ್ ಜನರಲ್ ಕೊಂಗೇಟಿರ ಚಂಗಪ್ಪ ಮತ್ತು ಮಿರೆಲ್ ದಂಪತಿಯ ಪುತ್ರಿಯಾಗಿದ್ದು ಉತ್ತರಾಂಚಲ್‍ನ ಅಲ್ಮೋರಾ ಎಂಬಲ್ಲಿ ನೆಲೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post