ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಅತಿವೃಷ್ಟಿ ಹಾನಿ ವೀಕ್ಷಣೆಗೆ ಆಗಮಿಸಿದ್ದ ಸಿದ್ದು ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತನೇ ಹೊರತು ಬಿಜೆಪಿಯವನಲ್ಲ ಎಂದು ವರದಿಯಾಗಿದೆ.
ಪ್ರಕರಣ ಕುರಿತಂತೆ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಸಂಪತ್ ಎಂಬ ವ್ಯಕ್ತಿ, ತಾನೇ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಎಂದು ಒಪ್ಪಿಕೊಂಡಿದ್ದಾನೆ.

Also read: ದೂರವಾಣಿ ಸಂಪರ್ಕ, ಕಾಲುಸಂಕಗಳ ನಿರ್ಮಾಣಕ್ಕೆ ಸೂಕ್ತ ಗಮನ ಹರಿಸುವಂತೆ ಸಂಸದ ರಾಘವೇಂದ್ರ ಮನವಿ
ವೀಡಿಯೋದಲ್ಲಿ ಆತನೇ ಹೇಳಿರುವ ಪ್ರಕಾರ, ತಾನು ಮೊದಲು ಹಿಂದೂ ನಂತರ ಕಾಂಗ್ರೆಸ್ ಕಾರ್ಯಕರ್ತ. ಕಾಂಗ್ರೆಸ್‌ನಲ್ಲಿ ಹಿಂದೂಗಳಿಲ್ಲವ. ಕೊಡಗಿನ ಹಿಂದೂಗಳು ದನದ ಮಾಂಸ ತಿನ್ನುತ್ತಾರೆ ಎಂದು ಸಿದ್ಧರಾಮಯ್ಯ ಹೇಳಿಕೆ ನೀಡಿದ್ದು ತಪ್ಪಲ್ಲವಾ. ಇದರಿಂದ ಮನನೊಂದು ಸಿದ್ಧರಾಮಯ್ಯನವರ Siddaramaiah ಕಾರಿನ ಮೇಲೆ ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದೇನೆ ಎಂದು ಹೇಳಿಕೊಂಡಿದ್ದಾನೆ.










Discussion about this post