ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಎತ್ತ ನೋಡಿದರತ್ತ ಮಕ್ಕಳ ಕಲರವ, ಬನ್ನಿ ತರಕಾರಿ, ಸೊಪ್ಪು, ಹಣ್ಣು, ತಿಂಡಿ, ತಿನಿಸು ಪಡೆಯಿರಿ ಎಂಬುದು ಮಕ್ಕಳಿಂದ ಕೇಳಿ ಬರುತ್ತಿತ್ತು… ಇದು ನಗರದ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ಮಕ್ಕಳ ದಸರಾ ಸಂದರ್ಭದಲ್ಲಿ ಕೇಳಿ ಬಂದ ಕೂಗು.
ಮಡಿಕೇರಿ ನಗರ ದಸರಾ ಸಮಿತಿ, #Madikeri Dasara ದಸರಾ ಜನೋತ್ಸವ ಸಾಂಸ್ಕ೭ತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಶನಿವಾರ ಮಕ್ಕಳ ಸಂತೆ ನಡೆಯಿತು.

ಪಾಲಕ್, ಮೆಂತೆ, ಸಬ್ಸಿಗೆ, ದಂಡು, ಕೀರೆ, ಗಣಿಕೆ, ನೊಗ್ಗೆ, ಬಸಳೆ, ಎಲೆಕೋಸು, ವೀಳ್ಯದೆಲೆಯಿಂದ ಹಿಡಿದು ಎಲ್ಲಾ ರೀತಿಯ ಸೊಪ್ಪುಗಳು, ತರಕಾರಿ ವಿಭಾಗದಲ್ಲಿ ಕುಂಬಳ, ಬೂದುಕುಂಬಳ, ಸೌತೆಕಾಯಿ, ಸೋರೆಕಾಯಿ ವಿವಿಧ ರೀತಿಯ ತರಕಾರಿಗಳು, ಹಣ್ಣುಗಳಲ್ಲಿ ಬಾಳೆ, ಕಿತ್ತಳೆ, ಚಕೋತಾ, ಸೇಬು,

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹಲವು ರೀತಿಯ ಹಣ್ಣುಗಳು, ತರಕಾರಿ ಹಾಗೂ ಮಕ್ಕಳು ಚಿತ್ರ ಬಿಡಿಸಿದ ಚಿತ್ರಗಳನ್ನು ಖರೀದಿ ಮಾಡಿದರು.
ಮಕ್ಕಳ ಸಂತೆಯಲ್ಲಿ ಮಕ್ಕಳು ತರಕಾರಿ, ಸೊಪ್ಪು, ಹಣ್ಣು ಕೊಳ್ಳುವ ಸಂದರ್ಭದಲ್ಲಿ ನಿಗಧಿತ ಬೆಲೆಗಿಂತ ೧೦ ರೂ. ಕಡಿಮೆ ಮಾಡುತ್ತೇವೆ, ತೆಗೆದುಕೊಳ್ಳಿ ಸರ್ ಎಂದು ಮಕ್ಕಳು ವ್ಯಾಪಾರ ಮಾಡುತ್ತಿದ್ದು ಮಕ್ಕಳಲ್ಲಿನ ವ್ಯಾಪಾರದ ಮನೋಭಾವ ಎದ್ದು ಕಂಡಿತು. ಮಕ್ಕಳಲ್ಲಿನ ಕ್ರೀಯಾಶೀಲತೆ, ವ್ಯಾಪಾರ ವಹಿವಾಟು ಮನೋಭಾವ ನಿಜಕ್ಕೂ ಗಮನಸೆಳೆಯಿತು.

Also read: ಹುಬ್ಬಳ್ಳಿ | ದರೋಡೆಗೆ ಯತ್ನ | ಸಿನಿಮಿಯಾ ರೀತಿಯಲ್ಲಿ ಪೊಲೀಸ್ ರೈಡ್ | ಕಳ್ಳರ ಮೇಲೆ ಫೈರಿಂಗ್
ಹಸಿರೇ ಉಸಿರು, ನೈಸರ್ಗಿಕವಾಗಿ ಬೆಳೆಸಿರುವ ತರಕಾರಿ ಸೇವಿಸಿ, ಚಿಂತೆಯಿಲ್ಲದ ಮಕ್ಕಳ ಸಂತೆ, ಹೀಗೆ ವಿವಿಧ ರೀತಿಯ ಷೋಷವಾಕ್ಯಗಳು ಮಕ್ಕಳ ಸಂತೆಯಲ್ಲಿ ಕಂಡುಬಂದವು.’
ಮಕ್ಕಳ ಸಂತೆ ಸಂದರ್ಭದಲ್ಲಿ ಮಡಿಕೇರಿ ದಸರಾ ಮಂಟಪವೇ ಕಣ್ತುಂಬಿಕೊಳ್ಳುವAತೆ ಕಿರುಮಂಟಪ ಮಾದರಿಯಲ್ಲಿ ಐತಿಹಾಸಿಕ ಸಂದೇಶ ಸಾರಿದ್ದು ವಿಶೇಷವಾಗಿತ್ತು, ಪೌರಾಣಿಕ ಮಂಟಪ ಮೂಲಕ ಚಿತ್ರಣ ಗಮನ ಸೆಳೆಯಿತು. ಮಕ್ಕಳ ಕೌಶಲ್ಯ, ಜ್ಞಾನ ಭಂಡಾರ ಮೆಚ್ಚುವಂತಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಕ್ಕಳ ವ್ಯಾಪಾರ ವಹಿವಾಟಿನ ಬಗ್ಗೆ ತಿಳಿದುಕೊಳ್ಳಲು ಮಕ್ಕಳ ಸಂತೆ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.

ದಕ್ಷಿಣ ವಲಯದ ಡಿಐಜಿಪಿ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪೌರಾಯುಕ್ತರಾದ ಎಚ್.ಆð.ರಮೇಶ್, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ದಸರಾ ಸಾಂಸ್ಕ೭ತಿಕ ಸಮಿತಿ ಅಧ್ಯಕ್ಷರಾದ ಅನಿಲ್ ಎಚ್.ಟಿ., ನಗರಸಭೆ ಮಾಜಿ ಅಧ್ಯಕ್ಷರಾದ ಅನಿತಾ ಪೂವಯ್ಯ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ಪೊನ್ನಚ್ಚನ ಮಧುಸೂದನ್, ರೋಟರಿ ಮಿಸ್ಟಿ ಕಿರಣ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ಇತರರು ಮಕ್ಕಳ ಸಂತೆ ವೀಕ್ಷಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















Discussion about this post