ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಪೊನ್ನಂಪೇಟೆಯ 11 ಕೆ.ವಿ ಫೀಡರ್ನ ವಿ.ವಿ ಕೇಂದ್ರದಿಂದ ಹೊರ ಹೋಗುವ ಪಾಲಿಬೆಟ್ಟ ಫೀಡರ್, ವಿರಾಜಪೇಟೆ ವಿ.ವಿ ಕೇಂದ್ರದಿಂದ ಹೊರ ಹೋಗುವ ಬೇತ್ರಿ ಫೀಡರ್, ಮೂರ್ನಾಡು ವಿ.ವಿ ಕೇಂದ್ರದಿಂದ ಹೊರ ಹೋಗುವ ಹೊದ್ದೂರು ಫೀಡರ್, ಸುಂಟಿಕೊಪ್ಪ ವಿ.ವಿ, ಕೇಂದ್ರದಿಂದ ಹೊರ ಹೋಗುವ ಮಾದಾಪುರ ಫೀಡರ್, ಶನಿವಾರಸಂತೆ ವಿ.ವಿ ಕೇಂದ್ರದಿಂದ ಹೊರ ಹೋಗುವ ಆಲೂರು ಫೀಡರ್ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ 11 ಕೆ.ವಿ ಫೀಡರ್ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವ ಹಿನ್ನೆಲೆ ಆಗಸ್ಟ್, 25 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಪಾಲಿಬೆಟ್ಟ, ಚೆನ್ನಂಗಿ, ಮೇಕೂರು, ಚಿಕ್ಕರೇಷ್ಮೆ, ಬೇತ್ರಿ, ಕುಕ್ಲೂರು, ಕದನೂರು, ಬೆಳ್ಳಾರಿಮಾಡು, ಹೊದ್ದೂರು, ಎಮ್ಮೆಮಾಡು, ಯವಕಪಾಡಿ ಕುಂಜಿಲ ಮಾದಾಪುರ, ಜಂಬೂರು, ಗರ್ವಾಲೆ, ಬೆಳಿಗೇರಿ, ಗೋಪಾಲಪುರ, ಬೀಟಿಕಟ್ಟೆ, ನಂದಿಗುಂದ, ಗೌಡಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ಕೋರಿದ್ದಾರೆ.
Also read:
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post