ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಏಪ್ರಿಲ್ 7 ರಿಂದ 30 ರವರೆಗೆ (ರಜೆ ದಿನ ಹೊರತುಪಡಿಸಿ) 21 ದಿನಗಳ ಕಾಲ ನುರಿತ ತರಬೇತುದಾರರಿಂದ ಬೇಸಿಗೆ ತರಬೇತಿ ಶಿಬಿರ #Summer Camp ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಈಜು ತರಬೇತುದಾರರು ಮನೋಹರ್ ದೂ.ಸಂ.9480032712, ಷಟಲ್ ಬ್ಯಾಡ್ಮಿಂಟನ್ ತರಬೇತುದಾರರು ಜ್ಯೋತಿ ಸೋಮಯ್ಯ 8792842853, ಟೇಬಲ್ ಟೆನ್ನಿಸ್ ತರಬೇತುದಾರರು ರಚನ್ ಪೊನ್ನಪ್ಪ 9110677030, ಅಥ್ಲೆಟಿಕ್ಸ್ ತರಬೇತುದಾರರು ಮಹಾಬಲ ಕೆ. 9980887499 ಮತ್ತು ಹಾಕಿ ತರಬೇತುದಾರರು ಬಿಂದ್ಯಾ ಕೆ.ಕೆ. 8105122430 ನ್ನು ಮತ್ತು ಕಚೇರಿ ದೂರವಾಣಿ ಸಂಖ್ಯೆ 9480032712 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
ಕ್ರೀಡೆಗಳ ವಿವರ
ಈ ಕುರಿತಂತೆ ವಿವರ ನೀಡಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ,ಈಜು, ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್(7 ರಿಂದ 18 ವರ್ಷದವರಿಗೆ), ಅಥ್ಲೆಟಿಕ್ಸ್, ಹಾಕಿ (10 ರಿಂದ 18 ವರ್ಷದವರಿಗೆ). ಈಜು ಬೆಳಗ್ಗೆ 9.30 ರಿಂದ 11.30 ರವರೆಗೆ ಮತ್ತು ಸಂಜೆ 5 ರಿಂದ 6.30 ಗಂಟೆಯವರೆಗೆ, ಷಟಲ್ ಬ್ಯಾಡ್ಮಿಂಟನ್ ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ, ಟೇಬಲ್ ಟೆನ್ನಿಸ್ ಸಂಜೆ 5.30 ರಿಂದ 6.30 ರವರೆಗೆ, ಅಥ್ಲೆಟಿಕ್ಸ್ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ಮತ್ತು ಹಾಕಿ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ. ಈಜು, ಷಟಲ್ ಬ್ಯಾಡ್ಮಿಂಟನ್ ಶುಲ್ಕ ರೂ.3,000, ಟೇಬಲ್ ಟೆನ್ನಿಸ್, ಅಥ್ಲೆಟಿಕ್ಸ್ ಮತ್ತು ಹಾಕಿ ತರಬೇತಿಗೆ ರೂ.2,000 ಆಗಿರುತ್ತದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















