ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಜಿಲ್ಲಾಡಳಿತ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನ, ಜೊತೆಗೆ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ಹಿನ್ನೆಲೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಆದ್ದರಿಂದ ಮಾರ್ಚ್, 18 ರಂದು ಬೆಳಗ್ಗೆ 07 ರಿಂದ ಸಂಜೆ 6 ಗಂಟೆ ವರೆಗೆ ಸಂಚಾರ ಮತ್ತು ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅವರು ತಿಳಿಸಿದ್ದಾರೆ.
ಬದಲಾವಣೆ ಮಾಡಲಾಗಿರುವ ಸ್ಥಳಗಳ ಮಾಹಿತಿ ಇಂತಿದೆ:
ಮಡಿಕೇರಿ ನಗರದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ರಸ್ತೆಯ ಎರಡು ಬದಿಗಳಲ್ಲಿ ವಾಹನ ನಿಲುಗಡೆ ನಿಷೇದಿಸಲಾಗಿದೆ. ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆಯ ದೊಡ್ಡ ತಿರುವು ವರೆಗೆ (ಎಂಆರ್‍ಎಫ್ ಟೈರ್ ಶಾಪ್) ವರೆಗೆ ವಾಹನ ನಿಲುಗಡೆ ನಿಷೇದಿಸಲಾಗಿದೆ, ನಗರದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಸೀಟ್ ಮಾರ್ಗವಾಗಿ ಸಾಯಿ ಗ್ರೌಂಡ್ ತಿರುವಿನ ವರೆಗೆ ಸಂಚಾರ ಹಾಗೂ ನಿಲುಗಡೆ ನಿಷೇದಿಸಲಾಗಿದೆ.
ನಗರದ ಮೊಣಪ್ಪ ಗ್ಯಾರೇಜ್ ಜಂಕ್ಷನ್‍ನಿಂದ ಪತ್ರಿಕಾ ಭವನ ಜಂಕ್ಷನ್‍ವರೆಗೆ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ರಸ್ತೆಯ ಎರಡು ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಹಾಗೆಯೇ ಸಮಾವೇಶಕ್ಕೆ ಬರುವಂತಹ ಬಸ್ಸುಗಳಿಗೆ ಹೊಸ ಖಾಸಗಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ನಾಲ್ಕು ಚಕ್ರ ವಾಹನಗಳಿಗೆ ಎಪಿಎಂಸಿ ಹಾಗೂ ಕೋಟೆ ಆವರಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಸರ್ಕಾರಿ ವಾಹನಗಳಿಗೆ ಮೂರ್ನಾಡು ರಸ್ತೆಯಲ್ಲಿರುವ ನಿರೀಕ್ಷಣಾ ಮಂದಿರದ ಮುಂದಿನ ಆವರಣ ಹಾಗೂ ಸಂತ ಮೈಕಲರ ಚರ್ಚ್ ಆವರಣದಲ್ಲಿ ವಾಹನ ನಿಲುಗಡೆಗೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post