ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶದೆಲ್ಲೆಡೆ ಸಂಭ್ರಮದಿಂದ ಸ್ವಾತಂತ್ರ ಅಮೃತ ಮಹೋತ್ಸವ ಆಚರಿಸಿದ ಬೆನ್ನಲ್ಲೇ ತಾಲೂಕಿನ ಕೋಡನಕಟ್ಟೆಯಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಲಾಯಿತು.
ಸಾಗರದ ವಿಜಯ ಸೇವಾ ಟ್ರಸ್ಟ್ ಯಕ್ಷಶ್ರೀ, ಹೊಸಬಾಳೆಯ ಮಹಾಲಕ್ಷ್ಮೀ ಅನಂತ ಸೇವಾ ಟ್ರಸ್ಟ್ ಹಾಗೂ ಕೋಡನಕಟ್ಟೆಯ ವಿನಾಯಕ ಕಲ್ಯಾಣ ಮಂದಿರ ವಿಶ್ವಸ್ಥ ಸಮಿತಿಯ ಸಂಯುಕ್ತಾಶ್ರಯದಲ್ಲಿ ಯಕ್ಷಗಾನ ಹಿಮ್ಮೇಳದಲ್ಲಿ ಯಕ್ಷಗಾಯನ ವೈಭವ ನಡೆಯಿತು.
ಭಾಗವತರಾಗಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಸಿರ್ಸಿ ತಾಲೂಕು, ಕು. ಶ್ರೀರಕ್ಷಾ ಹೆಗಡೆ, ಸಿದ್ದಾಪುರ, ಮದ್ದಲೆಯಲ್ಲಿ ಎನ್.ಜಿ. ಹೆಗಡೆ, ಚಂಡೆಯಲ್ಲಿ ಅಶೋಕ ಭಟ್ ಕ್ಯಾಸನೂರು ಸಾಥ್ ನೀಡಿದ್ದರು.
ಯಕ್ಷಗಾನ ಪದ್ಯಗಳ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ವಿವಿಧ ರಸ, ಭಾವ, ರಾಗ, ಮಟ್ಟುಗಳ ಪದ್ಯಗಳನ್ನು ಪಾರಂಪರಿಕ ಹಳೆಯ ಶೈಲಿಯಲ್ಲಿ ಪ್ರಸ್ತುತ ಪಡಿಸಲಾಯಿತು. ಶ್ರೀಪಾದ ಹೆಗಡೆಯವರು ಶ್ರೀರಾಮ ಪಟ್ಟಾಭಿಷೇಕ ಭಂಗದ ಪದ್ಯವಾದ ಏನಾದುದಂಬುಜ ನೇತ್ರೆ, ವಾಲಿವಧೆಯ ಚಿತ್ರತರಾಂಗಿ ಕೇಳ್ ಬಾಲೆ, ಶರಸೇತು ಬಂಧದ ಕೇಳಯ್ಯಾ ನಮ್ಮತನು ಬಡವಾದುದ, ಸುಭದ್ರಾ ಕಲ್ಯಾಣದ ಹಾಸ್ಯ ರಸದ ಪದ್ಯ ಎಲೆ ಎಲೆ ಹಾರ್ವ, ಭೀಷ್ಮ ವಿಜಯದ ಭೀಷ್ಮನ ಪ್ರವೇಶದ ಪದ್ಯಗಳನ್ನು ವಾಚಿಸುವ ಮೂಲಕ ಸಭಿಕರನ್ನು ರಂಜಿಸಿದರು.
ಯುವ ಭಾಗವತರಾದ ಶ್ರೀರಕ್ಷಾ ಹೆಗಡೆ ಭೀಷ್ಮ ವಿಜಯದ ಪರಮ ಸುಂದರಿ, ಸುಭದ್ರಾ ಕಲ್ಯಾಣದತಂಗಿ ಬಾರಮ್ಮ ಸೌಭದ್ರೆ, ಶ್ರೀ ಕೃಷ್ಣ ಗಾರುಡಿಯಯಾರೆ ಭಾಮಿನಿ ಸುಂದರಾAಗಿ, ವಿಭೀಷಣ ನೀತಿಯ ಭಕ್ತಿರಸದ ರಾಮರಾಮ – ಪದ್ಯಗಳನ್ನು ತಮ್ಮ ಸುಶ್ರಾವ್ಯಕಂಠದಲ್ಲಿ ಹಾಡಿದರು.
ಕಾರ್ಯಕ್ರಮ ಸಂಯೋಜನೆ ಮತ್ತು ನಿರೂಪಣೆಯನ್ನುಖ್ಯಾತ ವೈದ್ಯ ಡಾ.ಎಚ್.ಎಸ್. ಮೋಹನ್ ನಡೆಸಿದರು. ವಿಶ್ವಸ್ಥ ಸಮಿತಿಯ ಅಧ್ಯಕ್ಷ ಶಿವರಾಮ್ ಕಂಚಿ ಸ್ವಾಗತಿಸಿ, ಕಟ್ಟಿನಕೆರೆ ಸೀತಾರಾಮಯ್ಯ ವಂದಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post