ಮಡಿಕೆ ತಯಾರಿಸುವಾಗ ಅರೆಬೆಂದ ಮಡಿಕೆಗಳು, ಜಾಸ್ತಿ ಕಾದ ಮಡಿಕೆಗಳು, ಯಥೋಚಿತವಾಗಿ ಬೆಂದ ಮಡಿಕೆಗಳೆಂಬ ಮೂರು Category ಇದೆ. ಇದರಲ್ಲಿ ಅರೆ ಬೆಂದದ್ದು ಗಂಗೆಗೆ ಹಾಕಲು ತುಂಬಿಸುವ ಚಿತಾಭಸ್ಮಗಳಿಗೂ Unfit. ಈ ಪತ್ರಿಕೆ ಓದಿದಾಗ ನನಗೆ ಅನ್ನಿಸಿದ್ದು ಹೀಗೆ.
ಈ ಪೊರಕೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲನ ಮಾತು ಕೇಳಿ ನಗುವುದೋ ಅಳುವುದೋ ತಿಳಿಯದಾಗಿದೆ. ಅರೆಬೆಂದ ಮಾತುಗಳಿಗೆ ಮುಖ್ಯ ಕಾರಣ ವಾಕ್ ಪ್ರಬುದ್ಧತೆಯ ಕೊರತೆಗಳು. ಭಾಷೆಗಳ ಪದಬಳಕೆಗಳ ಕೊರತೆಗಳು ಬರುವುದು ಜಾತಕನ ಕುಂಡಲಿಯಲ್ಲಿ ದುರ್ಬಲ ಶನಿ ಇದ್ದಾಗ ಮಾತ್ರ.
ಕೇಜ್ರಿವಾಲನಿಗೆ ಏಕವಚನ ಬಳಸುವುದೇ ಸರಿ
ಕೇಜ್ರಿವಾಲನಿಗೆ ಮೇಷ ರಾಶಿಯಲ್ಲಿ ನೀಚನೂ ವಕ್ರನೂ ಆದಂತಹ ಶನಿಯು ಇನ್ನೂ 1° ಕೂಡಾ ಕ್ರಮಿಸಲಿಲ್ಲ. ಆದರೆ ವಕ್ರತೆಯಿಂದ ಮೀನ ರಾಶಿ ಫಲದಲ್ಲಿ ದೆಹಲಿಯಲ್ಲಿ ಮುಖ್ಯಮಂತ್ರಿಯೂ ಆಗಿಬಿಟ್ಟರು. ಆದರೇನು? ಯಾವ ಹುದ್ದೆ ಸಿಕ್ಕಿದರೂ ಅವರ ಮೂರ್ಖತನ ಬಿಡಬೇಕಲ್ವೇ? ಇತ್ತೀಚೆಗೆ ದೆಹಲಿಯಲ್ಲಿ ಲೋಕತಂತ್ರ ಬಚಾವೋ ಎಂಬ Rallyಯಲ್ಲಿ ‘In an all-out attack on Prime Minister Narendra Modi, Delhi Chief Minister Arvind Kejriwal has urged the voters not to elect a Class 12 pass person for the country’s top job in the upcoming Lok Sabha election 2019 ಎಂಬ ಮಾತನ್ನಾಡಿ ತನ್ನ 3rd class knowledge ತೋರಿಸಿಬಿಟ್ಟ. ಇಲ್ಲಿಯವರೆಗೆ ಆತನನ್ನು ಬಹುವಚನದಲ್ಲಿ ಕರೆಯಬೇಕೆಂದೆನಿಸಿತು. ಆದರೆ ಇದನ್ನು ನೋಡಿದ ಮೇಲೆ ಬಹುವಚನಕ್ಕೆ ಅಪಚಾರವಾದೀತು ಎಂದು ಏಕವಚನದಲ್ಲೇ ಬರೆಯಬೇಕೆನಿಸುತ್ತದೆ. ಇಂತಹ ಮೂರ್ಖರನ್ನೊಳಗೊಂಡ ಮಹಾಘಟ್ಬಂದನದ ಗತಿ ‘ಗೋವಿಂದ’ ಆಗುವುದರಲ್ಲಿ ಸಂದೇಹವೇ ಇಲ್ಲ.
ಅಪ್ರಬುದ್ಧರ ಮಾತಿಗೆ ಕಿಮ್ಮತ್ತು ಬೇಡ
ಮೋದಿಯವರನ್ನು ಠೀಕೆ ಮಾಡುವುದಕ್ಕೆ ಅಡ್ಡಿಯಿಲ್ಲ. ಆದರೆ ಈ ರೀತಿ Cheaper Talk ನಲ್ಲಿ ಹೇಳುವುದು ಸರಿಯಲ್ಲ. ಹಾಗೇನಾದರೂ ಬಳಸುವವರಿದ್ದರೆ ಅವರು ಮೂರ್ಖರು ಎಂದರ್ಥ. ನಾನು ಸಾಯುತ್ತೇನೆ ಎನ್ನುವವರು, ನಾನು ಮುಲಾಜಿನಲ್ಲಿದ್ದೇನೆ ಎನ್ನುವವರು, ದೊಡ್ಡ ಹುದ್ದೆಯಲ್ಲಿದ್ದರೂ ನಾನು ಒಬ್ಬ ಕ್ಲರ್ಕ್ ಎನ್ನುವವರು, ಪುರುಷತ್ವ ಇಲ್ಲದವರಂತೆ ಆಗಾಗ ಅಳುವವರು, ಹಿರಿಯರಿಗೆ ಇರಿದು ಪೊರಕೆ ಹಿಡಿವ ಪಕ್ಷದವರು, ಬಟಾಟೆಯಿಂದ ಚಿನ್ನ ತೆಗೆಯುವವರು ಇತ್ಯಾದಿ ಅಪ್ರಬುದ್ಧರು ಹೇಳಿದರೆ ಅದಕ್ಕೆ ಕವಡೆ ಕಿಮ್ಮತ್ತೂ ಕೊಡಬೇಕಾಗಿಲ್ಲ.
ನಮ್ಮಂತಹ ಜ್ಯೋತಿಷ್ಯರು ಇವರಾಡುವ ಮಾತಿನಲ್ಲಿ ನೊಂದುಕೊಳ್ಳದೆ ಇನ್ನಷ್ಟು ಜ್ಯೋತಿಷ್ಯಿಕ ಕಾರಣಗಳನ್ನು ಹುಡುಕುತ್ತೇವೆ ಮತ್ತು ನಾವು ಶೋಧನೆ ಮಾಡಿದಂತಹ ಸಿದ್ಧಾಂತಗಳಿಗೆ ಪುಷ್ಠಿಯೂ ಸಿಗುತ್ತದೆ. ಈ ಕೇಜ್ರಿವಾಲನ ಜಾತಕದಲ್ಲಿ ದುರ್ಬಲ ಶನಿ ಇರುವುದರಿಂದ ಇಂತಹ ಕೀಳು ಮಾತುಗಳು ಉದುರಿದೆ. ಇದೇ ರೀತಿ ರಾಹುಲ್ ಗಾಂಧಿಯ ಮಾತಿನಲ್ಲಿ ವ್ಯಂಗ್ಯವಾಗಿಯೂ, ಹಾಸ್ಯಾಸ್ಪದವಾದ, ತನಗೆ ತಾನೇ ಅವಮಾನಿಸಿಕೊಳ್ಳುವಂತಹ ಮಾತುಗಳು ಉದುರುತ್ತವೆ.
ವಿಶೇಷ ಎಂದರೆ ಅವರಿಗೆ ಒಂದು ಕ್ಷಣವೂ ನನ್ನ ಮಾತು ಅಸಂಭದ್ಧವಾಗಿದೆ, ಅಪಹಾಸ್ಯಕ್ಕೆ ಗುರಿಯಾಗಿದೆ ಎಂದು ಅನ್ನಿಸುವುದೇ ಇಲ್ಲ. ಒಂದುವೇಳೆ ಅನ್ನಿಸುತ್ತಿದ್ದರೆ ಈ ರಾಜಕೀಯ ಸಹವಾಸವೇ ಬೇಡ, ನನ್ನಿಂದ ಮಾತನಾಡಕ್ಕೆ ಆಗಲ್ಲ ಎಂದು ರಾಜಕೀಯದಿಂದ ದೂರ ಹೋಗುತ್ತಿದ್ದರು. ಇವರ ಅಸಂಭದ್ಧ ಮಾತು ಕೇಳಿದ ಸಭಿಕರು ಕರತಾಡನ ಮಾಡುವುದನ್ನು ಇವರು ನೋಡುತ್ತಾ, ‘ಇದು ನನ್ನ ಭಾಷಾ ಶೈಲಿಯನ್ನು ಜನರು ಕೇಳಿ ಅಭಿನಂದಿಸುತ್ತಾರೆ’ ಎಂದು ಹಿಗ್ಗಿಬಿಡುತ್ತಾರೆ. ಜನರು ಅಪಹಾಸ್ಯ ಮಾಡ್ತಿದ್ದಾರೆ ಎಂದು ಇವರಿಗೆ ಅನ್ನಿಸದಿರುವುದೇ ಇವರ ಅದೃಷ್ಟ.
ಅಲ್ಲರೀ.. ದೇಶ ವಿದೇಶಗಳಲ್ಲಿ ಮೋದಿಯವರಿಗೆ ಅಷ್ಟೊಂದು ಪುರಸ್ಕಾರ ಸಿಕ್ಕುತ್ತಿರುವದನ್ನು ಇವರು ನೋಡಿಯೂ ಮೋದಿಯವರ ವಿರುದ್ಧ ಇಂತಹ 3rd grade ಮಾತನ್ನಾಡುತ್ತಾರೆ ಎಂದರೆ ಇವರಿಗಿಂತ ಮೂರ್ಖರು ಬೇರೆ ಯಾರಿದ್ದಾರೆ. ಇಂತಹ ಜನರ ಗುಂಪೇ ಒಂದು ಮಹಾ ಘಟ್ಬಂದನ್.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post