ನವದೆಹಲಿ: ದಶಕಗಳಿಂದ ಭಾರೀ ಹೋರಾಟಕ್ಕೆ ಕಾರಣವಾಗಿದ್ದ ಬಹುನಿರೀಕ್ಷಿತ ಮಹದಾಯಿ ತೀರ್ಪು ಇಂದು ಪ್ರಕಟವಾಗಿದ್ದು, ರಾಜ್ಯಕ್ಕೆ ಸಮಾಧಾನಕರ ಬಹುಮಾನದಂತೆ ದೊರೆತಿದೆ.
ಈ ಕುರಿತಂತೆ ಮಹದಾಯಿ ನ್ಯಾಯಾಧೀಕರಣ ಇಂದು ತೀರ್ಪು ಪ್ರಕಟಿಸಿದ್ದು, ಕರ್ನಾಟಕ್ಕೆ ಒಟ್ಟು 36.55 ಟಿಎಂಸಿ ನೀರನ್ನು ಪಾಲು ಮಾಡಿಕೊಟ್ಟಿದೆ.
ಉತ್ತರ ಕರ್ನಾಟಕದ ಭಾಗಕ್ಕೆ ಕುಡಿಯುವ ನೀರಿಗಾಗಿ ರಾಜ್ಯದ ಪರವಾಗಿ 36.55 ಟಿಎಂಸಿ ನೀರನ್ನು ಕೇಳಲಾಗಿತ್ತು. ಆದರೆ ರಾಜ್ಯದ ಪಾಲಿಗೆ 13.5 ಟಿಎಂಸಿ ನೀರನ್ನು ಮಾತ್ರ ಟ್ರಿಬ್ಯೂನಲ್ ನೀಡಿದೆ.
ಇನ್ನು, ಇದರಲ್ಲಿ ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರನ್ನು ಬಳಕೆ ಮಾಡಲು ಸೂಚಿಸಲಾಗಿದ್ದು, ಕುಡಿಯುವ ನೀರಿಗಾಗಿ 7.5 ಟಿಎಂಸಿ ನೀರನ್ನು ಕೇಳಲಾಗಿತ್ತು. ರಾಜ್ಯದ ಜಲ ವಿದ್ಯುತ್ ಉತ್ಪಾದನೆ ಬಳಕೆಗೆ 8.5 ಟಿಎಂಸಿ ನೀರು ಬಳಕೆಗೆ ಸೂಚಿಸಲಾಗಿದೆ.
ಮಹದಾಯಿ ಕಣಿವೆಯಿಂದ ಮಲಪ್ರಭಾ ಕಣಿವೆಗೆ ನೀರು ಹರಿಸಲು ಅನುಮತಿ ನೀಡಲಾಗಿದೆ.
ರಾಜ್ಯದ ಮಟ್ಟಿಗೆ ದಶಕಗಳಿಂದ ನಡೆಸಲಾಗುತ್ತಿದ್ದ ಹೋರಾಟಕ್ಕೆ ಸಮಾಧಾನ ಎನ್ನುವ ತೀರ್ಪು ಇದಾಗಿದ್ದು, ಜಯದ ಹತ್ತಿರಕ್ಕೆ ರಾಜ್ಯದ ಹೋರಾಟ ಬಂದು ನಿಂತಿದೆ.
Discussion about this post