ಕಲ್ಪ ಮೀಡಿಯಾ ಹೌಸ್ | ಮಹಾರಾಷ್ಟ್ರ |
ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಸೊಸೆಗೆ ತಮಾಷೆಗಾಗಿ ಹೊಡೆದ ಪರಿಣಾಮ ಕಂದಮ್ಮ ಜೀವ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ ನಗರದಲ್ಲಿ ನಡೆದಿದೆ.
ವ್ಯಕ್ತಿ ತಮಾಷೆಗಾಗಿ ಬಾಲಕಿಯ ಕಪಾಳಕ್ಕೆ ಹೊಡೆದಿದ್ದು ಮಗು ಕಲ್ಲಿಗೆ ಬಡಿದುಕೊಂಡ ಪರಿಣಾಮ ಕೂಸು ಜೀವ ಬಿಟ್ಟಿದೆ. ಆನಂತರ ಆತಂಕಗೊಂಡ ಆತ ಮಗುವಿನ ಶವವನ್ನು ತನ್ನ ಸ್ನೇಹಿತರೊಂದಿಗೆ ಸೇರಿ ಸುಟ್ಟು ಹಾಕಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಬಾಲಕಿ ನ.18 ರಂದು ಗುರುವಾರ ಥಾಣೆಯ ಪ್ರೇಮ್ ನಗರದಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಬಾಲಕಿ ನಾಪತ್ತೆಯಾದ ನಂತರ, ಆಕೆಯ ತಾಯಿಯ ದೂರಿನ ಮೇರೆಗೆ ಅಪಹರಣ ಪ್ರಕರಣವನ್ನು ದಾಖಲಿಸಲಾಗಿದೆ.

Also read: ಭದ್ರಾವತಿ ತಾಲ್ಲೂಕು ಕಚೇರಿಯ ಸಿಬ್ಬಂದಿಗಳಿಂದ ಕರ್ತವ್ಯ ಲೋಪ ಆರೋಪ: ಅಮಾನತ್ತಿನಲ್ಲಿಡಲು ಆಗ್ರಹ
ಪೊಲೀಸರ ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ. ತಾನು ಹೊಡೆದಿದ್ದರಿಂದ ಮಗು ಸತ್ತಿತ್ತು ಎಂದು ಒಪ್ಪಿಕೊಂಡಿದ್ದರೂ, ಉದ್ದೇಶಪೂರ್ವಕವಾಗಿ ಕೊಂದಿಲ್ಲ ಎಂದು ಹೇಳಿದ್ದಾನೆ.

ಇದರಿಂದ ಹೆದರಿದ ಆರೋಪಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಆಟೋ ತರಿಸಿಕೊಂಡು ಶವವನ್ನು ಅಪರಹಣ ಮಾಡಿದ್ದಾನೆ. ಆನಂತರ, ಉಲ್ಲಾಸ ನಗರ ಬಳಿಯ ಪೊದೆಗಳಲ್ಲಿ ಶವವನ್ನು ಸುಟ್ಟು ಬಿಸಾಕಿದ್ದಾನೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ತನಿಖೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post