ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಇಂದು ಬೆಳ್ಳಂಬೆಳಿಗ್ಗೆ ತೋಟಗಾರಿಕಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ತರಕಾರಿ ಮತ್ತು ಈರುಳ್ಳಿ ಆಲೂಗಡ್ಡೆ ಮಾರುಕಟ್ಟೆಗಳಿಗೆ ಭೇಟಿ ನೀಡಿದರು. ಅಲ್ಲದೇ ಬ್ಯಾಟರಾಯನಪುರ ಹಾಗೂ ದಾಸನಪುರ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ. ಪಾಟೀಲ್ ಅವರು, ಸಾಮಾಜಿಕ ಅಂತರ ಎನ್ನುವುದು ಸ್ವಯಂಪ್ರೇರಣೆಯಾಗಬೇಕು. ಸಾಮಾಜಿಕ ತುರ್ತು ಪರಿಸ್ಥಿತಿ ಇದಾಗಿರುವುದರಿಂದ ನಮ್ಮಷ್ಟಕ್ಕೆ ನಾವು ನಿಬಂಧನೆ ಹಾಕಿಕೊಳ್ಳಬೇಕು. ಪೊಲೀಸರಿಂದಾಗಲೀ ಅಥವಾ ಸರ್ಕಾರದ ಒತ್ತಾಯವಾಗಿ ಆಗಲೀ ಆಗಬಾರದು. ಸಾಮಾಜಿಕ ಅಂತರ ಎನ್ನುವುದು ಕೊರೊನಾ ಮಹಾಮಾರಿಯ ವಿರುದ್ಧ ಸಮರ ಸಾರಲು ಇರುವ ಏಕೈಕ ಪರಿಹಾರ. ಜನರ ಹಾಗೂ ಸಾಮಾಜಿಕ ಆರೋಗ್ಯದ ಹಿತದೃಷ್ಟಿಯಿಂದಲೇ ಸಾಮಾಜಿಕ ಅಂತರ ಲಾಕ್’ಡೌನ್ಗೆ ಕರೆ ನೀಡಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ತರಕಾರಿ ಬೆಳೆದ ರೈತರಿಗಾಗಲೀ ಗ್ರಾಹಕರಿಗಾಗಲೀ ಲಾಕ್’ಡೌನ್’ನಿಂದ ಯಾವುದೇ ತೊಂದರೆಯಾಗಬಾರದೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಿಟ್ಟ ಕ್ರಮಕೈಗೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೃಷಿಕರು ತಮ್ಮ ಕೃಷಿ ಚಟುವಟಿಕೆ ಪರಿಕರ ಮಾರಾಟ್ ನಡೆಸಲು ಯಾವುದೇ ತೊಂದರೆಯಾಗದು. ಇದನ್ನು ಪರಿಶೀಲನೆ ಮಾಡಲೆಂದು ತಾವು ಹಾಗೂ ಇತರೆ ಸಚಿವರು ಭೇಟಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಕೃಷಿ ಬಂಧುಗಳಲ್ಲಿ ಮನವಿ
ಇಷ್ಟೂ ತಿಂಗಳು ಹೊಟ್ಟೆ ಬಟ್ಟೆ ಕಟ್ಟಿ ಹಣ್ಣು, ತರಕಾರಿ ಬೆಳೆದಿರುವಿರಿ. ನಿಮ್ಮ ಕೃಷಿಕಾಯಕದ ಬಗ್ಗೆ ನಮಗೆ ಕಳಕಳಿಯಿದೆ. ಪ್ರಸ್ತುತ ಕೋವಿಡ್ -19 ರ ಹಾವಳಿಯಿಂದ ಇಡೀ ಜಗತ್ತು, ನಮ್ಮ ದೇಶ ತತ್ತರಿಸುತ್ತಿದೆ. ಈ ಸಂಗತಿ ನಿಮಗೆ ಚೆನ್ನಾಗಿ ಗೊತ್ತಿದೆ.
ಆದರೆ ನಾವು ಬೆಳೆದ ಫಲಕ್ಕೆ ಬೆಲೆ ಸಿಗದೇ ಇದ್ದಾಗ ನಮಗೆ ನಿರಾಶೆ, ಹತಾಶೆ ಆಗುವುದು ಸಾಮಾನ್ಯ. ಪರಿಸ್ಥಿತಿ ಈಗ ಬೇರೆಯದೇ ಆಗಿದೆ. ತಕ್ಕ ಬೆಲೆ ಸಿಗದಿರಲು, ಸರಗಕಾರವಾಗಲೀ, ಸಮಾಜವಾಗಲೀ ಕಾರಣೀಭೂತರಲ್ಲ. ಅನಾರೋಗ್ಯಕರ ವಾತಾವರಣವೇ ಮಾರುಕಟ್ಟೆಯನ್ನ ಪ್ರತಿಬಂಧಿಸಿಬಿಟ್ಟಿದೆ.
ಇಂತಹ ಸನ್ನಿವೇಶದಲ್ಲಿ ರೈತಬಂಧುಗಳು ಹಣ್ಣು,ತರಕಾರಿ,ಹಾಲು ಇತ್ಯಾದಿಗಳನ್ನ ಬಿಸಾಕುವುದು, ಚೆಲ್ಲುವುದು ಯಾಕೋ ಸರಿಯಲ್ಲ.
೧) ಅಗತ್ಯ ಇರುವ ಬಡವರಿಗೆ ಹಂಚಿ, ಪುಣ್ಯ ಬರುತ್ತದೆ
೨) ಕಡಿಮೆ ಬೆಲೆಗಾದರೂ ಮಾರಿಬಿಡಿ
೩) ಕೊನೇ ಪಕ್ಷ ಬೀಜ ಖರೀದಿ, ಸಾಗಾಣಿಕೆ ಬೆಲೆಗಾದರೂ ಬರುವಂತೆ ಮಾರಿಬಿಡಿ. ಬಿಸಾಕುವುದು, ಚೆಲ್ಲುವುದು …
ಎಲ್ಲವೂ ತಿಳಿದಂತಹ ರೈತರಿಗೆ ಸರಿಯಾದ ಕ್ರಮವಲ್ಲ ಎಂದು ಶ್ರೀಸಾಮಾನ್ಯರನ್ನ ಕಾಡುತ್ತಿರುವ ಪ್ರಶ್ನೆ.
(ವರದಿ: ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093
Discussion about this post