ಬೆಂಗಳೂರು: ರಾಜ್ಯ ರಾಜಕೀಯದ ದೊಂಬರಾಟ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ ಎಂಬ ವಿಚಾರದ ನಡುವಯೇ, ವಿಧಾನಸಭಾ ಕಲಾಪಕ್ಕೆ ಸಿಎಂ ಕುಮಾರಸ್ವಾಮಿ ಗೈರಾಗುವ ಮೂಲಕ ವಿಶ್ವಾಸಮತ ಸಾಬೀತು ಮಾಡುವುದನ್ನು ಮುಂದೂಡುವ ಯತ್ನಕ್ಕೆ ಮತ್ತೆ ಕೈ ಹಾಕಿದ್ದಾರೆ.
ಇಂದು ಸಿಎಂ ಕುಮಾರಸ್ವಾಮಿ ಎರಡು ಬಾರಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ, ಇಂದು ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ. ಹೀಗಾಗಿ, ಇನ್ನೂ ಎರಡು ದಿನ ಕಾಲವಕಾಶ ನೀಡಿ ಎಂದು ಕೇಳಿದ್ದು, ಇದನ್ನು ತಳ್ಳಿ ಹಾಕಿರುವ ಸ್ಪೀಕರ್, ಇಂದು ಸಂಜೆಯೊಳಗೆ ವಿಶ್ವಾಸಮತ ಸಾಬೀತು ಪಡಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು, ಪ್ರಸ್ತುತ ವಿಧಾನಸಭಾ ಕಲಾಪ ನಡೆಯುತ್ತಿದ್ದು, ಸಿಎಂ ಕುಮಾರಸ್ವಾಮಿ ಗೈರಾಗಿದ್ದು, ಅವರ ಕಚೇರಿಯಲ್ಲಿ ಕುಳಿತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕಲಾಪವನ್ನು ಮುಂದೂಡಿಸುವ ಪ್ರಯತ್ನದ ಮೂಲಕ ವಿಶ್ವಾಸಮತ ಸಾಬೀತು ಮಾಡುವುದನ್ನು ಮುಂದೂಡಲು ಯತ್ನಿಸುತ್ತಿದ್ದಾರೆ.
ಆದರೆ, ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತಾರೆಯೇ ಅಥವಾ ಚರ್ಚೆಯನ್ನೇ ಮುಂದುವರಿಸುತ್ತಾರಾ? ಇಲ್ಲವೇ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ.
ಇದೇ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ವಿಧಾನಸೌಧಕ್ಕೆ ಭೇಟಿ ನೀಡಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಅಲ್ಲದೇ, ವಿಧಾನಸೌಧದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Discussion about this post