ಭದ್ರಾವತಿ: ವ್ಯಾಸರಾಯರ ಮೂಲ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವುದನ್ನು ಖಂಡಿಸಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಆನೆಗೊಂದಿಯ ಶ್ರೀ ವ್ಯಾಸರಾಯರ ವೃಂದಾವನವನ್ನು ಕಿಡಿಗೇಡಿ ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸ ಗೊಳಿಸಿರುವುದು ಕೇವಲ ವಿಪ್ರ ಸಮಾಜಕ್ಕೆ ಮಾತ್ರವಲ್ಲ. ನಾಡಿನ ಎಲ್ಲಾ ವರ್ಗದವರಿಗೆ ಮಾಡಿರುವ ಅಪಮಾನವಾಗಿದೆ. ರಾಜ್ಯ ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೇ ಬಂಧಿಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ರಮಾಕಾಂತ್, ಶಂಕರ ಸೇವಾ ಸಮಿತಿ, ಕರಾವಳಿ ವಿಪ್ರ ಬಳಗ, ಹರಿದಾಸ ಮಹಿಳಾ ಮಂಡಳಿ, ಮಧ್ವಮಂಡಳಿಗಳ ಪ್ರಮುಖರಾದ ಪವನ್ ಕುಮಾರ್ ಉಡುಪ, ನರಸಿಂಹಸ್ವಾಮಿ, ವಾಸುದೇವ ಮೂರ್ತಿ, ನರಸಿಂಹಚಾರ್, ಎಚ್.ಎಸ್. ಸುಬ್ರಮಣ್ಯ, ಕೇಶವಮೂರ್ತಿ, ಗೋಪಾಲಕೃಷ್ಣ, ಗೋಪಾಲಕೃಷ್ಣ, ಜಿ.ಎಸ್. ಸುಬ್ರಮಣ್ಯ, ಕೆ. ಮಂಜುನಾಥ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿ ತಹಸೀಲ್ದಾರ್ ಸೋಮಶೇಖರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post