ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಕ್ಯಾಬ್ ಚಾಲಕನೊಬ್ಬರಿಗೆ ಟೆರರಿಸ್ಟ್ #Terrorist ಎಂದು ಕರೆದ ಕಾರಣದಿಂದಾಗಿ ಮಲಯಾಳಂ ಚಿತ್ರರಂಗದ ನಟ ಜಯಕೃಷ್ಣನ್ #ActorJayakrishnan ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಪೊಲೀರು ಇಬ್ಬರನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಬಿಎನ್’ಎಸ್ 352, 353(2) ಅಡಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಕಳೆದ ಅ.9 ರಂದು ಈ ಮೂವರು ಆ್ಯಪ್ ಮೂಲಕ ಮಂಗಳೂರಿನ #Mangalore ಬಿಜೈಗೆ ಕ್ಯಾಬ್ ಬುಕ್ ಮಾಡಿದ್ದರು. ಅಹ್ಮದ್ ಶಫೀಕ್ ಎಂಬವರು ಕರೆ ಮಾಡಿ ವಿಚಾರಿಸಿದ್ದರು.ಈ ವೇಳೆ ಹಿಂದಿ, ಮಲಯಾಳಂ ಭಾಷೆಯಲ್ಲಿ ಮಾತನಾಡಿದ ಆರೋಪಿಗಳು, ನೀನು ಮುಸ್ಲಿಂ ತೀವ್ರವಾದಿ, ಟೆರರಿಸ್ಟ್ ಎಂದು ಅವಾಚ್ಯವಾಗಿ ಬೈದಿದ್ದಾರೆ ಎಂದು ಈ ಬಗ್ಗೆ ಕ್ಯಾಬ್ ಚಾಲಕ ಅಹ್ಮದ್ ಶಫೀಕ್, ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜಯಕೃಷ್ಣನ್ ಹಾಗೂ ಸಂತೋಷ್ ಅಬ್ರಹಾಂ ಎನ್ನುವವರನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ವಿಮಲ್ ಎನ್ನುವವನು ನಾಪತ್ತೆಯಾಗಿದ್ದಾನೆ.
ಇನ್ನು, ಪೊಲೀಸರು ಜಯಕೃಷ್ಣನ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕುಡಿದಿದ್ದ ಪರಿಣಾಮವಾಗಿ ಈ ರೀತಿ ಮಾತನಾಡಿದ್ದಾಗಿ ಜಯಕೃಷ್ಣನ್ ಹೇಳಿದ್ದಾರೆ ಎಂದು ವರದಿಯಾಗಿದೆ. ಜಯಕೃಷ್ಣನ್ ಅವರ ಧ್ವನಿಯ ಸ್ಯಾಂಪಲ್ ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post