ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಜ್ಯದಲ್ಲೇ ಖ್ಯಾತಿ ಪಡೆದಿರುವ ಮಲೆನಾಡಿನ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಚಂದ್ರಗುತ್ತಿ ದೇವಾಲಯದಲ್ಲಿ #ChandraguttiTemple ಕಳ್ಳತನದ ಯತ್ನ ನಡೆದಿದ್ದು, ದೇವಿಯ ಮೂರ್ತಿಯ ಮುಖವಾಡಯನ್ನೇ ದುರುಳರು ಕಿತ್ತೊಗೆದಿದ್ದಾರೆ.
ದೇವಾಲಯ ಹಾಗೂ ಗರ್ಭಗುಡಿಯ ಬಾಗಿಲನ್ನು ಮುರಿದಿರುವ ಕಳ್ಳರು ರೇಣುಕಾ ದೇವಿಯ ಮೂರ್ತಿಯ ಮುಖವಾಡಯನ್ನೇ ಕಿತ್ತು ಬಿಸಾಡಿದ್ದಾರೆ. ಸದ್ಯ ದೊರೆತಿರುವ ಮಾಹಿತಿಯಂತೆ ದೇವಾಲಯದ ಹುಂಡಿಯನ್ನು ಕಳ್ಳರು ಒಡೆದಿಲ್ಲ.
ಸದ್ಯದ ಮಾಹಿತಿಯಂತೆ ದೇವಾಲಯದಲ್ಲಿ ಯಾವುದೇ ವಸ್ತುಗಳು ಕಳ್ಳತನವಾದ ಕುರಿತಾಗಿ ತಿಳಿದುಬಂದಿಲ್ಲ. ಹೀಗಾಗಿ, ಇದೊಂದು ವಿಫಲ ಯತ್ನ ಎನ್ನಲಾಗಿದೆ.
ಇನ್ನು, ನಿನ್ನೆಯಷ್ಟೇ ಹುಣ್ಣಿಮೆಯಾಗಿದ್ದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು. ಹೀಗಾಗಿ, ದೇವಾಲಯದಲ್ಲಿ ಅಧಿಕ ಕಾಣಿಕೆಗಳು ಸಲ್ಲಿಕೆಯಾಗಿರುತ್ತವೆ. ಇದನ್ನು ದೋಚುವ ಯತ್ನವೂ ಸಹ ಇದು ಆಗಿರಬಹುದು ಎನ್ನಲಾಗಿದೆ.
ಪ್ರಮುಖವಾಗಿ, ದೇವಾಲಯದಲ್ಲಿ #Temple ಅತ್ಯಾಧುನಿಕ ಮೂಲ ಸೌಕರ್ಯಗಳು, ಸಿಸಿಟಿವಿ ಕ್ಯಾಮೆರಾ #CCTVCamera ಸೇರಿದಂತೆ ಭದ್ರತಾ ವ್ಯವಸ್ಥೆಗಳು ಇಲ್ಲದ ಕಾರಣ ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿದ್ದು, ಪರಿಶೀಲನೆ ನಡೆದಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post