ಹೊಸನಗರ: ರಿಪ್ಪನ್ ಪೇಟೆ ಸಮೀಪದ ಮಾದಪುರ ಗ್ರಾಮದಿಂದ ಕಾಣೆಯಾಗಿದ್ದ ಪೂಜಾ(17) ಎಂಬ ಯುವತಿ ಇಂದು ಶವವಾಗಿ ತನ್ನ ಮನೆ ಎದುರಿಗೆ ಇರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಇಲ್ಲಿನ ಈಶ್ವರ್ ಶೇಟ್ ಎನ್ನುವವರ ಪುತ್ರಿ ಪೂಜಾ, ರಿಪ್ಪನ್ ಪೇಟೆಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಸೋಮವಾರ ಮಧ್ಯಾಹ್ನದಿಂದ ಈಕೆ ಕಾಣೆಯಾಗಿದ್ದು, ಈ ಬಗ್ಗೆ ರಿಪ್ಪನ್ ಪೇಟೆ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
ಯುವತಿ ಇಂದು ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಬಾವಿಯಲ್ಲಿ ಆಕೆಯ ಶವ ದೊರೆತಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
(ಮಾಹಿತಿ: ಮಹೇಶ್ ಹಿಂಡ್ಲಮನೆ)
















