ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆ ಜಿಲ್ಲೆಯಾದ್ಯಂತ ಭಾರೀ ಅವಾಂತರ ಸೃಷ್ಠಿಸಿದ್ದು, ಶಿವಮೊಗ್ಗದ ಗಾಂಧಿನಗರದ ಜನವಸತಿ ಪ್ರದೇಶದಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ಜನರು ಹಿಡಿಶಾಪ ಹಾಕುತ್ತಿದ್ದಾರೆ.
Also Read: ಎಸ್’ಎಸ್’ಎಲ್’ಸಿ ಫಲಿತಾಂಶ: ಶಿವಮೊಗ್ಗ ಜಿಲ್ಲೆಯ ಎಷ್ಟು ವಿದ್ಯಾರ್ಥಿಗಳು 625 ಅಂಕ ಗಳಿಸಿದ್ದಾರೆ? ಇಲ್ಲಿದೆ ಮಾಹಿತಿAlso Read: ಚತುಷ್ಪಥ ರಸ್ತೆ ಅಗಲೀಕರಣ: 875 ಮರಗಳ ಕಟಾವಿಗೆ ಪರಿಸರ ಪ್ರೇಮಿಗಳ ಆಕ್ಷೇಪ
ಗಾಂಧಿ ನಗರ ಎ ಬ್ಲಾಕ್’ನ 2ನೆಯ ಕ್ರಾಸ್ ಸುತ್ತಮುತ್ತ ಸುಮಾರು 2 ಅಡಿಗಳಷ್ಟು ನೀರು ನಿಂತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಜನರು ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಮಳೆ ಹೆಚ್ಚಾಗಿ, ನೀರು ಏರಿಕೆಯಾದರೆ ಸಂಪರ್ಕವೇ ತೊಂದರೆಯಾಗುವ ಆತಂಕವಿದೆ.
ಹಲವು ಮನೆಗಳಿಗೆ ನೀರು ನುಗ್ಗಿದ್ದರೆ, ಗಾಂಧಿ ನಗರ ಪಾರ್ಕ್ ಸಂಪೂರ್ಣ ಜಲಾವೃತಗೊಂಡಿದೆ.
ಸ್ಮಾರ್ಟ್ ಸಿಟಿ ಕಾಮಗಾರಿಯ ವಿಳಂಬವೇ ಈ ರೀತಿ ನೀರು ನುಗ್ಗಿ, ಅವ್ಯವಸ್ಥೆಯಾಗಲು ಕಾರಣ ಎಂದು ಜನರು ಹಿಡಿಶಾಪ ಹಾಕಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post