ಕಲ್ಪ ಮೀಡಿಯಾ ಹೌಸ್
ಸಾಗರ: ತಾಲೂಕಿನ ಶ್ರೀಕ್ಷೇತ್ರ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಜುಲೈ 7ರಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
ಈ ಕುರಿತಂತೆ ಶ್ರೀಕ್ಷೇತ್ರ ವರದಪುರ ಶ್ರೀಧರ ಸೇವಾ ಮಹಾಮಂಡಲ ಮಾಹಿತಿ ಪ್ರಕಟಿಸಿದ್ದು, ಬುಧವಾರದಿಂದ ಶ್ರೀಧರಾಶ್ರಮವನ್ನು ಭಕ್ತಾದಿಗಳಿಗೆ ಶ್ರೀ ಭಗವಾನರ ದರ್ಶನಕ್ಕೆ ಅನುವಾಗುವಂತೆ ತೆರೆಯಲಾಗುತ್ತದೆ. ಪ್ರತಿದಿನ ಬೆಳಗ್ಗೆ 7ರಿಂದ 9.30ರ ವರೆಗೆ ಮತ್ತು ಮಧ್ಯಾಹ್ನ 2.30ರಿಂದ 4.30 ರವರೆಗೆ ಭಕ್ತಾದಿಗಳ ಪ್ರವೇಶಕ್ಕೆ ಸಮಯ ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಆಶ್ರಮವನ್ನು ಪ್ರವೇಶಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿರುತ್ತದೆ.
ಇನ್ನು, ಶ್ರೀ ಭಗವಾನರ ಸಮಾಧಿ ಮಂದಿರದ ಒಳಗೆ ಯಾರಿಗೂ ಪ್ರವೇಶವಿರುವುದಿಲ್ಲ. ಹೊರಗಡೆಯಿಂದಲೇ ದರ್ಶನ ಮಾಡತಕ್ಕದ್ದು. ದಯಮಾಡಿ ಶ್ರೀ ಮಹಾಮಂಡಲಕ್ಕೆ ಯಾವುದೇ ರೀತಿಯ ಒತ್ತಡವನ್ನು ತರಬಾರದಾಗಿ ವಿನಂತಿಸಿದ್ದು, ಭಕ್ತಾದಿಗಳು ಇದಕ್ಕೆ ಸಹಕರಿಸಬೇಕು ಎಂದು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post