ಕಲ್ಪ ಮೀಡಿಯಾ ಹೌಸ್
ತೀರ್ಥಹಳ್ಳಿ: ಅಪ್ರಾಪ್ತೆಯನ್ನು ಬಲವಂತದಿಂದ ಮದುವೆಯಾಗಿ ಅತ್ಯಾಚಾರ ಎಸಗಿದ ಆರೋಪದಡಿ ಯುವಕನನ್ನು ಬಂಧಿಸಿದ್ದಾರೆ.
ಪಟ್ಟಣದ ಇಂದಾವರ ವಾಸಿ ಯುವಕ ಕಮಲ್(25) ಬಂಧಿತ ಆರೋಪಿಯಾಗಿದ್ದು,ಈತ ಜೂನ್ 11ರಂದು ಅಪ್ರಾಪ್ತೆ ಬಾಲಕಿಯನ್ನು ಪುಸಲಾಯಿಸಿ ಒತ್ತಾಯದಿಂದ ಪಟ್ಟಣ ಸಮೀಪದ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ.
ಹದಿನೇಳು ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾದ ಬಳಿಕ ತಾಲೂಕಿನ ಸುರಾನಿ ಸಮೀಪದ ತೋಟವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ಪೋಷಕರು ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















